1 Chronicles 1:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲರಲ್ಲಿ ಅರಸುಗಳು ಪ್ರಾರಂಭವಾಗುವದಕ್ಕಿಂತ ಮುಂಚೆ ಎದೋಮ್ಯರಲ್ಲಿ ಅರಸರಿದ್ದರು. ಅವರು ಯಾರೆಂದರೆ: ಮೊದಲನೇ ಅರಸನಾದ ಬೆಳ. ಇವನು ಬೆಯೋರನ ಮಗನು. ದಿನ್ಹಾಬಾ ಎಂಬುದು ಬೆಳನ ಪಟ್ಟಣವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.
Kannada BSI Bible 2016
ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರಿಗೆ ಅರಸರಿದ್ದದ್ದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳುತ್ತಿದ್ದ ಅರಸರು - ಬೆಯೋರನ ಮಗನಾದ ಬೆಳನು (ಮೊದಲನೆಯವನು). ಅವನ ರಾಜಧಾನಿಯ ಹೆಸರು ದಿನ್ಹಾಬಾ.
Kannada Bible (KNCL) BSI 2016
ಇಸ್ರಯೇಲರಲ್ಲಿ ಅರಸರೇ ಇರಲಿಲ್ಲದ ಕಾಲದಲ್ಲಿ ಎದೋಮ್ ದೇಶವನ್ನು ಆಳಿದ ಅರಸರು. ಬೆಯೋರನ ಮಗ ಬೆಳನು; ದಿನ್ಹಾಬಾ ಇವನ ರಾಜಧಾನಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ: ಬೆಯೋರನ ಮಗನಾದ ಬೆಲಗನು; ಅವನ ಪಟ್ಟಣದ ಹೆಸರು ದಿನ್ಹಾಬಾ.