1 Chronicles 11:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪಸ್ಥಮ್ಮೀಮ್ ಎಂಬ ಸ್ಥಳದಲ್ಲಿ ಇವನು ದಾವೀದನೊಂದಿಗಿದ್ದನು. ಅಲ್ಲಿಗೆ ಫಿಲಿಷ್ಟಿಯರು ಯುದ್ಧಮಾಡಲು ಬಂದಿದ್ದರು. ಆ ಸ್ಥಳದ ಒಂದು ಹೊಲದಲ್ಲಿ ಬಾರ್ಲಿಯ ಬೆಳೆಯು ಬೆಳೆದು ನಿಂತಿತ್ತು. ಫಿಲಿಷ್ಟಿಯರ ಎದುರಿನಿಂದ ಇಸ್ರೇಲರು ಓಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫಿಲಿಷ್ಟಿಯರು ಪಸ್ದಮ್ಮೀಮಿನಲ್ಲಿ ಯುದ್ಧಕ್ಕೆ ಬಂದಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು. ಇಸ್ರಾಯೇಲರು ಫಿಲಿಷ್ಟಿಯರಿಗೆ ಹೆದರಿ ಓಡಿಹೋಗಲು ಪ್ರಯತ್ನಿಸಿದಾಗ,
Kannada BSI Bible 2016
ಇವನು ದಾವೀದನ ಸಂಗಡ ಪಸ್ದವ್ಮೆಾಮಿನ ಬಳಿಯಲ್ಲಿದ್ದನು. ಅಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕೆ ಕೂಡಿಸಲ್ಪಟ್ಟಿರುವಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫಿಲಿಷ್ಟಿಯರು ಪಸ್ದಮ್ಮೀವಿುನಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು; ಇಸ್ರಾಯೇಲ್ಯರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಲು
Kannada Bible (KNCL) BSI 2016
ಈತ ಪಸ್ದಮ್ಮೀಮಿ ಎಂಬಲ್ಲಿ ಫಿಲಿಷ್ಟಿಯರಿಗೆ ವಿರುದ್ಧ ಹೂಡಿದ ಕಾಳಗದಲ್ಲಿ ದಾವೀದನ ಪರವಾಗಿ ಹೋರಾಡಿದನು. ಇಸ್ರಯೇಲರು ಹಿಂಜರಿದು ಓಡಿಹೋಗುತ್ತಿದ್ದಾಗ ಇವನು ಜವೆಗೋದಿಯ ಹೊಲದಲ್ಲಿ ಇದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಸ್ ದಮ್ಮೀಮ್ ಎಂಬಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕಾಗಿ ಸೇರಿದಾಗ ಇವನು ದಾವೀದನ ಸಂಗಡ ಇದ್ದನು. ಅಲ್ಲಿ ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು.