1 Chronicles 11:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಬ್ಷೈಯು ಮೂವತ್ತು ಮಂದಿ ರಣವೀರರಿಗಿಂತಲೂ ಎರಡರಷ್ಟು ಪರಾಕ್ರಮಿಯಾಗಿದ್ದನು. ಅವನು ಅವರಿಗೆ ನಾಯಕನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಉಳಿದ ಇಬ್ಬರಿಗಿಂತ ಇವನೇ ಘನತೆಯುಳ್ಳವನಾಗಿದ್ದು ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಜನರಿಗೆ ಸಮಾನನಾಗಿರಲಿಲ್ಲ.
Kannada BSI Bible 2016
ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಉಳಿದ ಇಬ್ಬರಿಗಿಂತ ಇವನೇ ಘನವಾದವನಾದದರಿಂದ ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಮಂದಿಗೆ ಸಮಾನನಾಗಿರಲಿಲ್ಲ.
Kannada Bible (KNCL) BSI 2016
ಅವನು ಈ ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾದುದಲ್ಲದೇ ಅದರ ನಾಯಕನೂ ಆದನು. ಆದರೆ ‘ಮೂವರು ಪ್ರಮುಖ ವೀರರು’ ಎಂಬ ಪಡೆಯವರಷ್ಟು ಪ್ರಸಿದ್ಧನಾಗಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು; ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.