1 Chronicles 12:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚುಹಾಕಲು ಬಂದಿರುವುದಾದರೆ ನಾನು ನಿರಪರಾಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀವು ಸ್ನೇಹಭಾವದಿಂದ ಸಹಾಯ ಮಾಡುವುದಕ್ಕಾಗಿ ನನ್ನ ಬಳಿಗೆ ಬಂದಿರುವುದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವುದು. ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವುದಾದರೆ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ನೋಡಿ ದಂಡಿಸಲಿ” ಎಂದು ಹೇಳಿದನು.
Kannada BSI Bible 2016
ಆಗ ದಾವೀದನು ಅವರನ್ನು ಎದುರು ಗೊಳ್ಳಲು ಹೊರಟುಹೋಗಿ ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದು--ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ ನನ್ನ ಹೃದಯವು ನಿಮ್ಮ ಸಂಗಡ ಏಕವಾಗಿರುವದು. ಆದರೆ ದೋಷವು ನನ್ನ ಕೈಗಳಲ್ಲಿ ಇಲ್ಲದಿರುವಾಗ ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ ನಮ್ಮ ಪಿತೃ ಗಳ ದೇವರು ನೋಡಿ ಗದರಿಸಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಸ್ನೇಹಭಾವದಿಂದ ಸಹಾಯಮಾಡುವದಕ್ಕಾಗಿ ನನ್ನ ಬಳಿಗೆ ಬಂದಿರುವದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವದು; ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವದಾದರೆ ನಮ್ಮ ಪಿತೃಗಳ ದೇವರು ನಿಮ್ಮನ್ನು ನೋಡಿ ದಂಡಿಸಲಿ ಅಂದನು.
Kannada Bible (KNCL) BSI 2016
ದಾವೀದನು ಅವರನ್ನು ಎದುರುಗೊಂಡು “ಸ್ನೇಹಿತರಂತೆ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮಗೆ ಇಲ್ಲಿ ಸ್ವಾಗತ. ನಮ್ಮೊಂದಿಗೆ ಸೇರಿಕೊಳ್ಳಿ, ನಾನು ನಿಮಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ. ಆದರೆ ನೀವು ನನ್ನನ್ನು ನನ್ನ ವೈರಿಗಳಿಗೆ ಹಿಡಿದುಕೊಡಲು ಬಂದಿದ್ದರೆ ನಮ್ಮ ಪಿತೃಗಳ ದೇವರು ಅದನ್ನು ಬಲ್ಲವರಾಗಿದ್ದು ನಿಮ್ಮನ್ನು ದಂಡಿಸುವರು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದಾವೀದನು ಅವರನ್ನು ಎದುರುಗೊಳ್ಳಲು ಹೊರಟುಹೋಗಿ ಅವರಿಗೆ ಉತ್ತರವಾಗಿ, “ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ, ನನ್ನ ಹೃದಯವು ನಿಮ್ಮ ಸಂಗಡ ಒಂದಾಗಿರುವುದು. ಆದರೆ ದೋಷವು ನನ್ನ ಕೈಯಲ್ಲಿ ಇಲ್ಲದಿರುವಾಗ, ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ, ನಮ್ಮ ಪಿತೃಗಳ ದೇವರು ನೋಡಿ ನ್ಯಾಯತೀರಿಸಲಿ,” ಎಂದನು.