1 Chronicles 12:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವರು ತಮ್ಮ ಎಡಗೈಯಿಂದಲೂ ಬಲಗೈಯಿಂದಲೂ ಬಿಲ್ಲುಗಳಿಂದ ಬಾಣಗಳನ್ನೂ ಕವಣೆಗಳಿಂದ ಕಲ್ಲುಗಳನ್ನೂ ಗುರಿಯಿಟ್ಟು ಹೊಡೆಯಬಲ್ಲವರಾಗಿದ್ದರು. ಇವರೆಲ್ಲರೂ ಬೆನ್ಯಾಮೀನನ ಕುಲದವನಾದ ಸೌಲನ ಕುಟುಂಬದವರು. ಅವರ ಹೆಸರುಗಳು ಇಂತಿವೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಿಲ್ಲುಗಾರರೂ, ಎಡಗೈ ಬಲಗೈಗಳಿಂದ ಕಲ್ಲುಗಳನ್ನೂ ಮತ್ತು ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವುದಕ್ಕಾಗಿ ಅವನ ಬಳಿಗೆ ಬಂದ ಯುದ್ಧವೀರರ ಪಟ್ಟಿ.
Kannada BSI Bible 2016
ಎಡಬಲ ಕೈಗಳಿಂದ ಕಲ್ಲು ಗಳನ್ನೂ ಬಿಲ್ಲುಗಳಿಂದ ಅಂಬುಗಳನ್ನೂ ಎಸೆಯಬಲ್ಲ ಬೆನ್ಯಾವಿಾನನ ಗೋತ್ರದ ಸೌಲನ ಸಹೋದರರೂ ಆಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಿಲ್ಲುಗಾರರೂ ಎಡಬಲ ಕೈಗಳಿಂದ ಕಲ್ಲುಗಳನ್ನೂ ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವದಕ್ಕಾಗಿ ಅವನ ಬಳಿಗೆ ಬಂದ ರಣವೀರರ ಪಟ್ಟಿ.
Kannada Bible (KNCL) BSI 2016
ಸೌಲನೂ ಬೆನ್ಯಾಮೀನ್ ಗೋತ್ರಕ್ಕೆ ಸೇರಿದವನೇ. ದಾವೀದನನ್ನು ಹಿಂಬಾಲಿಸಿದವರು ಎಡಗೈಯಿಂದಾಗಲೀ ಬಲಗೈಯಿಂದಾಗಲೀ ಬಾಣಗಳನ್ನೆಸೆಯುವವರೂ ಕವಣೆಗಳಲ್ಲಿ ಕಲ್ಲುಗಳನ್ನಿಟ್ಟು ಎಸೆಯಲು ಶಕ್ತರೂ ಆಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.