1 Chronicles 12:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು ಹೆಬ್ರೋನಿನಲ್ಲಿದ್ದಾಗ ಯುದ್ಧಸನ್ನದ್ಧರಾಗಿದ್ದವರು ದಾವೀದನಿಗೆ ಸೌಲನ ರಾಜ್ಯವನ್ನು ಕೊಡಲು ಬಂದರು. ಇದು ಯೆಹೋವನು ಮುಂತಿಳಿಸಿದಂತೆ ಆಯಿತು. ಅವರ ಸಂಖ್ಯೆಯು ಹೀಗಿದೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವುದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪುಗುಂಪುಗಳಾಗಿ ಬಂದ ಯುದ್ಧಸನ್ನದ್ಧರಾಗಿದ್ದವರ ಲೆಕ್ಕ;
Kannada BSI Bible 2016
ಕರ್ತನ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವದಕ್ಕೆ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿ ಕೊಂಡು ಬಂದ ದಂಡುಗಳ ಲೆಕ್ಕವೇನಂದರೆ --
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪು ಗುಂಪುಗಳಾಗಿ ಬಂದ ಯುದ್ಧಸನ್ನದ್ಧರ ಲೆಕ್ಕ -
Kannada Bible (KNCL) BSI 2016
ಸರ್ವೇಶ್ವರಸ್ವಾಮಿ ವಾಗ್ದಾನ ಮಾಡಿದಂತೆ ಸೌಲನಿಗೆ ಬದಲಾಗಿ ದಾವೀದನನ್ನು ಅರಸನನ್ನಾಗಿ ಮಾಡಲು, ಅನೇಕ ಸಿದ್ಧಸೈನಿಕರು ಹೆಬ್ರೋನಿಗೆ ಬಂದು ದಾವೀದನ ಸೈನ್ಯದಲ್ಲಿ ಸೇರಿದರು. ಅವರ ಸಂಖ್ಯೆಗಳು ಈ ಕೆಳಕಂಡಂತಿವೆ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವುದಕ್ಕೆ, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿಕೊಂಡು ಬಂದ ದಂಡುಗಳ ಸಂಖ್ಯೆ ಇದು: