1 Chronicles 12:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆನ್ಯಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರೆಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಸೈನಿಕರು ಬಂದರು. ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಸೇರಿಕೊಂಡಿದ್ದರು.
Kannada BSI Bible 2016
ಸೌಲನ ಸಹೋದರರಾಗಿರುವ ಬೆನ್ಯಾವಿಾನನ ಮಕ್ಕಳಲ್ಲಿ ಮೂರು ಸಾವಿರಮಂದಿ; ಇಂದಿನ ವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಮಂದಿ; ಆವರೆಗೆ ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಹೊಂದಿಕೊಂಡಿದ್ದರು.
Kannada Bible (KNCL) BSI 2016
ಸೌಲನ ಸಂಬಂಧಿಕರಾದ ಬೆನ್ಯಾಮೀನ್ ಗೋತ್ರದಿಂದ: 3,000 ಸೈನಿಕರು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.