1 Chronicles 12:39 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಜನರೆಲ್ಲಾ ದಾವೀದನೊಂದಿಗೆ ಮೂರು ದಿನಗಳನ್ನು ಕಳೆದರು. ಅವರ ಕುಟುಂಬದವರು ತಯಾರಿಸಿದ ಆಹಾರವನ್ನು ಅವರು ಊಟಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಅಲ್ಲಿ ಮೂರು ದಿನ ದಾವೀದನ ಸಂಗಡ ಇದ್ದು ಅನ್ನ ಪಾನಗಳನ್ನು ತೆಗೆದುಕೊಂಡರು. ಅವರ ಸಹೋದರರು ಅವರಿಗೋಸ್ಕರ ಎಲ್ಲವನ್ನೂ ಸಿದ್ಧಪಡಿಸಿದರು.
Kannada BSI Bible 2016
ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಇದ್ದು ತಿನ್ನುತ್ತಾ ಕುಡಿಯುತ್ತಾ ಇದ್ದರು.ಅವರ ಸಹೋದರರು ಅವರಿಗೋಸ್ಕರ ಸಿದ್ಧಮಾಡಿ ದರು.ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್‌, ಜೆಬುಲೂನ್‌, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಅಲ್ಲಿ ಮೂರು ದಿವಸ ದಾವೀದನ ಸಂಗಡ ಇದ್ದು ಅನ್ನಪಾನಗಳನ್ನು ತೆಗೆದುಕೊಂಡರು; ಅವರ ಸಹೋದರರು ಅವರಿಗೋಸ್ಕರ ಎಲ್ಲವನ್ನೂ ಸಿದ್ಧಪಡಿಸಿದರು.
Kannada Bible (KNCL) BSI 2016
ಅವರುದಾವೀದನೊಂದಿಗೆ, ತಮ್ಮ ಸಹಬಾಂಧವರು ಸಿದ್ಧಪಡಿಸಿದ ಆಹಾರ ಪಾನೀಯಗಳನ್ನು ಸೇವಿಸುತ್ತಾ, ಮೂರು ದಿನಗಳನ್ನು ಕಳೆದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಅವರ ಕುಟುಂಬದವರು ಅವರಿಗೋಸ್ಕರ ಸಿದ್ಧಮಾಡಿದ ಆಹಾರವನ್ನು ತಿನ್ನುತ್ತಾ, ಕುಡಿಯುತ್ತಾ ಇದ್ದರು.