1 Chronicles 12:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರಣ್ಯದಲ್ಲಿದ್ದ ಕೋಟೆಯಲ್ಲಿ ಗಾದ್ ಕುಲದ ಕೆಲವರು ದಾವೀದನನ್ನು ಸೇರಿಕೊಂಡರು. ಇವರು ಯುದ್ಧದಲ್ಲಿ ನುರಿತ ಸೈನಿಕರಾಗಿದ್ದರು. ಈಟಿ ಬರ್ಜಿಗಳಲ್ಲಿ ಪರಿಣಿತರು; ಸಿಂಹಗಳಂತೆ ಕ್ರೂರಿಗಳು; ಬೆಟ್ಟದ ಮೇಲೆ ಜಿಂಕೆಯ ತರಹ ವೇಗವಾಗಿ ಓಡಬಲ್ಲವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯುದ್ಧವೀರರೂ ಯುದ್ಧನಿಪುಣರೂ, ಗುರಾಣಿಬರ್ಜಿಗಳಲ್ಲಿ ಪ್ರವೀಣರೂ, ಸಿಂಹಮುಖರೂ, ಬೆಟ್ಟದ ಜಿಂಕೆಯಂತೆ ಓಡುವ ಚುರುಕು ಕಾಲಿನವರು ಆಗಿದ್ದು, ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಸೇರಿಕೊಂಡ ಗಾದ್ಯರು:
Kannada BSI Bible 2016
ಇದಲ್ಲದೆ ಅರಣ್ಯದಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು; ಅವರ ಮುಖಗಳು ಸಿಂಹದ ಮುಖಗಳ ಹಾಗಿದ್ದವು ಮತ್ತು ಪರ್ವತಗಳ ಮೇಲೆ ಇರುವ ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಣವೀರರೂ ಯುದ್ಧನಿಪುಣರೂ ಗುರಾಣಿಬರ್ಜಿಗಳಲ್ಲಿ ಪ್ರವೀಣರೂ ಸಿಂಹಮುಖರೂ ಬೆಟ್ಟದ ಜಿಂಕೆಯಂತೆ ಪಾದತ್ವರಿತರೂ ಆಗಿದ್ದು ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಕೂಡಿಕೊಂಡ ಗಾದ್ಯರು -
Kannada Bible (KNCL) BSI 2016
ದಾವೀದನು ಮರುಭೂಮಿಯ ಕೋಟೆಯಲ್ಲಿದ್ದಾಗ ಅವನ ಪಡೆಗಳಲ್ಲಿ ಬಂದು ಸೇರಿದ ಗಾದ್ ಗೋತ್ರದ ಪ್ರಸಿದ್ಧರೂ ಅನುಭವಶಾಲಿಗಳೂ ಆದ ಯುದ್ಧವೀರರ ಹೆಸರುಗಳು: ಇವರು ನೋಡಲು ಸಿಂಹಗಳಂತೆ ಭೀಕರರೂ ಪರ್ವತದ ಜಿಂಕೆಗಳಂತೆ ಚುರುಕಾದವರೂ ಗುರಾಣಿ, ಈಟಿಗಳನ್ನು ಉಪಯೋಗಿಸುವುದರಲ್ಲಿ ನಿಪುಣರೂ ಆಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಮರುಭೂಮಿಯಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ, ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು. ಅವರ ಮುಖಗಳು ಸಿಂಹಗಳಂತೆ ಭೀಕರವಾಗಿದ್ದವು. ಪರ್ವತಗಳ ಮೇಲೆ ಇವರು ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.