1 Chronicles 14:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ದಾವೀದನು ಅವುಗಳನ್ನೆಲ್ಲಾ ಒಟ್ಟುಸೇರಿಸಿ ಸುಡಿಸಿಬಿಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.
Kannada BSI Bible 2016
ಫಿಲಿಷ್ಟಿಯರು ತಮ್ಮ ದೇವರು ಗಳನ್ನು ಅಲ್ಲಿ ಬಿಟ್ಟುಬಿಟ್ಟದ್ದರಿಂದ ದಾವೀದನು ಅಪ್ಪಣೆ ಕೊಟ್ಟಾಗ ಬೆಂಕಿಯಿಂದ ಅವು ಸುಡಲ್ಪಟ್ಟವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ದೇವರುಗಳನ್ನು ದಾವೀದನು ಸುಡಿಸಿಬಿಟ್ಟನು.
Kannada Bible (KNCL) BSI 2016
ಫಿಲಿಷ್ಟಿಯರು ತಲೆ ತಪ್ಪಿಸಿಕೊಂಡು ಓಡಿಹೋಗುವಾಗ ತಮ್ಮ ವಿಗ್ರಹಗಳನ್ನು ಅಲ್ಲೇ ಬಿಟ್ಟುಹೋದರು. ಅವೆಲ್ಲವನ್ನು ಸುಟ್ಟುಹಾಕಬೇಕೆಂದು ದಾವೀದನು ಅಪ್ಪಣೆಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಲ್ಲಿ ಫಿಲಿಷ್ಟಿಯರು ತಮ್ಮ ದೇವರುಗಳನ್ನು ಬಿಟ್ಟು ಹೋದುದರಿಂದ, ದಾವೀದನು ಅವುಗಳನ್ನು ಸುಟ್ಟುಹಾಕಬೇಕೆಂದು ಅಪ್ಪಣೆಮಾಡಿದನು.