1 Chronicles 15:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಲೇವಿಯರ ನಾಯಕನಾದ ಕೆನನ್ಯನು ಗಾಯಕರ ಮುಖಂಡನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಲೇವಿಯರಲ್ಲಿ ನಾಯಕನೂ ಆಗಿದ್ದ ಕೆನನ್ಯನು ಮಂಜೂಷ ಹೊತ್ತವರಿಗೆ ಮೇಲ್ವಿಚಾರಕನಾಗಿದ್ದನು.
Kannada BSI Bible 2016
ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡು ವದಕ್ಕೆ ನೇಮಿಸಲ್ಪಟ್ಟಿದ್ದನು. ಅವನು ಗ್ರಹಿಕೆಯುಳ್ಳವನಾ ದದರಿಂದ ಹಾಡುವದಕ್ಕೆ ಕಲಿಸುತ್ತಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬುದ್ಧಿವಂತನೂ ಹೊರೆಹೊರುವವರ ನಾಯಕನೂ ಆದ ಕೆನನ್ಯನು ಮಂಜೂಷ ಹೊತ್ತವರನ್ನು ನಡಿಸುವವನು.
Kannada Bible (KNCL) BSI 2016
ಸಂಗೀತದಲ್ಲಿ ಪರಿಣತನಾದ ಕೆನನ್ಯ, ಲೇವಿಯರ ವಾದ್ಯವೃಂದಕ್ಕೆ ಮುಖ್ಯಸ್ಥನಾಗಿ ನೇಮಕಗೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡುವುದಕ್ಕೆ ನೇಮಕವಾದನು. ಅವನು ಸಂಗೀತದಲ್ಲಿ ನಿಪುಣನಾದ್ದರಿಂದ ಅವನು ಮುಖ್ಯಸ್ಥನಾಗಿದ್ದನು.