1 Chronicles 16:42 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
See verse 41
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೇಮಾನ್ ಮತ್ತು ಯೆದುತೂನರ ಹತ್ತಿರ ವಾದ್ಯಗಾರರಿಗಾಗಿ ತುತ್ತೂರಿ, ತಾಳ ಮೊದಲಾದ ವಾದ್ಯಗಳೂ ಮತ್ತು ದೇವಕೀರ್ತನಾ ಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿ ನೇಮಿಸಲ್ಪಟ್ಟರು.
Kannada BSI Bible 2016
ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೇಮಾನ್‍ಯೆದುತೂನರ ಹತ್ತಿರ ವಾದ್ಯಗಾರರಿಗೋಸ್ಕರ ತುತೂರಿ ತಾಳ ಮೊದಲಾದ ದೇವಕೀರ್ತನಾಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳೂ ದ್ವಾರಪಾಲಕರಾಗಿ ನೇವಿುಸಲ್ಪಟ್ಟರು.
Kannada Bible (KNCL) BSI 2016
ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರ ಸಂಗಡ ತುತೂರಿ ಊದಲು, ತಾಳ ಬಾರಿಸಲು, ದೇವರ ಗೀತವಾದ್ಯಗಳೂ ಸಹಿತವಾಗಿ ಹೇಮಾನನೂ, ಯೆದುತೂನನೂ ಮೇಲ್ವಿಚಾರಕರಾಗಿದ್ದರು. ಯೆದುತೂನನ ಪುತ್ರರು ದ್ವಾರಪಾಲಕರಾಗಿದ್ದರು.