1 Chronicles 17:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನಿನ್ನ ಚಿತ್ತಕ್ಕನುಸಾರವಾಗಿ ಇಂಥ ಮಹತ್ಕಾರ್ಯವನ್ನು ನೀನು ನನಗೋಸ್ಕರ ಮಾಡಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ, ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ಸತ್ಯ ಮಹತ್ವವನ್ನು ತೋರ್ಪಡಿಸಿರುವೆ.
Kannada BSI Bible 2016
ನೀನು ನಿನ್ನ ಸೇವಕನನ್ನು ಬಲ್ಲೆ; ಕರ್ತನೇ, ನಿನ್ನ ಸೇವಕನ ನಿಮಿತ್ತವಾಗಿಯೂ ನಿನ್ನ ಸ್ವಂತ ಹೃದಯದ ಪ್ರಕಾರವಾಗಿಯೂ ಈ ಮಹತ್ತಾದ ಕಾರ್ಯಗಳನ್ನು ತಿಳಿಯಮಾಡುವದಕ್ಕೆ ಈ ದೊಡ್ಡಸ್ತಿಕೆಯನ್ನೆಲ್ಲಾ ತೋರಿ ಸಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡಿಸಿ ನಿನ್ನ ಸರ್ವ ಮಹತ್ವವನ್ನು ತೋರ್ಪಡಿಸಿದಿ.
Kannada Bible (KNCL) BSI 2016
ಸರ್ವೇಶ್ವರಾ, ನಿಮ್ಮ ದಾಸನಾದ ನನ್ನ ಹಿತಕ್ಕಾಗಿಯೂ ತಮ್ಮ ಚಿತ್ತಾನುಸಾರವಾಗಿಯೂ ಈ ಮಹತ್ಕಾರ್ಯಗಳನ್ನೆಲ್ಲಾ ನಡೆಸಿ ನಿಮ್ಮ ಸರ್ವಮಹತ್ವವನ್ನು ತೋರ್ಪಡಿಸಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮ್ಮ ಸೇವಕನ ನಿಮಿತ್ತವಾಗಿಯೂ, ನಿಮ್ಮ ಚಿತ್ತಾನುಸಾರವಾಗಿಯೂ ಈ ಮಹಾಕಾರ್ಯಗಳನ್ನೆಲ್ಲಾ ನಡೆಸಿ, ಎಲ್ಲ ವಾಗ್ದಾನಗಳನ್ನು ತಿಳಿಯಪಡಿಸಿರುವಿರಿ.