1 Chronicles 18:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
8ಅಲ್ಲದೆ ಟಿಭತ್ ಮತ್ತು ಕೂನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೊಲೊಮೋನನು ತಾಮ್ರದ ತೊಟ್ಟಿ, ತಾಮ್ರದ ಕಂಬ ಮತ್ತು ದೇವಾಲಯದ ಬೇರೆ ಸಾಮಾಗ್ರಿಗಳನ್ನು ಮಾಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ದಾವೀದನು ಹದರೆಜರನ ಟಿಭತ್ ಮತ್ತು ಕೂನ್ ಎಂಬ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಕಂಚಿನ ಕಡಲೆಂಬ ಪಾತ್ರೆಯನ್ನೂ, ಕಂಬಗಳನ್ನೂ ಮತ್ತು ಬೇರೆ ಸಾಮಾನುಗಳನ್ನು ಇದೇ ತಾಮ್ರದಿಂದ ಮಾಡಿಸಿದನು.
Kannada BSI Bible 2016
ಇದಲ್ಲದೆ ಹದರೆಜರನ ಪಟ್ಟಣಗಳಾದ ಟಭತಿನಿಂದಲೂ ಕೂನಿನಿಂದಲೂ ದಾವೀದನು ಅತ್ಯಧಿಕವಾಗಿ ತಾಮ್ರವನ್ನು ತಂದನು. ಅದರಿಂದ ಸೊಲೊಮೋನನು ತಾಮ್ರದ ಸಮುದ್ರ ವನ್ನೂ ಸ್ತಂಭಗಳನ್ನೂ ತಾಮ್ರದ ಪಾತ್ರೆಗಳನ್ನೂ ಮಾಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಹದರೆಜರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಸಮುದ್ರವೆನಿಸಿಕೊಳ್ಳುವ ಪಾತ್ರೆಯನ್ನೂ ಕಂಬಗಳನ್ನೂ ಬೇರೆ ಸಾಮಾನುಗಳನ್ನೂ ಮಾಡಿಸಿದನು.
Kannada Bible (KNCL) BSI 2016
ಇದಲ್ಲದೆ, ಹದರೆಜೆರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಹೇರಳ ತಾಮ್ರವನ್ನು ತೆಗೆದುಕೊಂಡು ಬಂದನು. ಸೊಲೊಮೋನನು ‘ಕಂಚಿನ ಕಡಲೆಂಬ ಪಾತ್ರೆ’ಯನ್ನೂ ಕಂಬಗಳನ್ನೂ ಇನ್ನಿತರ ಸಾಮಾನುಗಳನ್ನೂ ಮಾಡಿಸಿದ್ದು ಆ ತಾಮ್ರದಿಂದಲೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಹದದೆಜೆರನ ಪಟ್ಟಣಗಳಾದ ಟಿಭತಿನಿಂದಲೂ, ಕೂನ್‌ದಿಂದಲೂ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು. ಅದರಿಂದ ಸೊಲೊಮೋನನು ಕಂಚಿನ ಕೊಳವನ್ನೂ, ಸ್ತಂಭಗಳನ್ನೂ, ವಿವಿಧ ಪಾತ್ರೆಗಳನ್ನೂ ಮಾಡಿಸಿದನು.