1 Chronicles 19:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋವಾಬನು ರಣರಂಗವನ್ನು ವೀಕ್ಷಿಸಿದಾಗ ಎರಡು ಗುಂಪಿನ ಸೈನ್ಯಗಳಿದ್ದದ್ದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾಬನು ತನ್ನಲ್ಲಿದ್ದ ರಣವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು, ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.
Kannada BSI Bible 2016
ಯುದ್ಧವು ತನಗೆ ವಿರೋಧವಾಗಿ ಹಿಂದೆಯೂ ಮುಂದೆಯೂ ಇರುವದನ್ನು ಯೋವಾ ಬನು ಕಂಡಾಗ ಅವನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಸಮಸ್ತರೊಳಗೆ ಜನರನ್ನು ಆದುಕೊಂಡು ಅವರನ್ನು ಅರಾಮ್ಯರಿಗೆದುರಾಗಿ ವ್ಯೂಹ ಕಟ್ಟಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.
Kannada Bible (KNCL) BSI 2016
ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಯೇಲರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು ಅವರನ್ನು ಸಿರಿಯಾದವರಿಗೆ ಇದಿರಾಗಿ ನಿಲ್ಲಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋವಾಬನು, ಯುದ್ಧವು ತನ್ನ ವಿರೋಧವಾಗಿ ಹಿಂದೆಯೂ, ಮುಂದೆಯೂ ಇರುವುದನ್ನು ಕಂಡಾಗ, ಅವನು ಇಸ್ರಾಯೇಲಿನ ಎಲ್ಲಾ ಶ್ರೇಷ್ಠ ಸೈನಿಕರನ್ನು ಆಯ್ದುಕೊಂಡು, ಅರಾಮ್ಯರಿಗೆ ಎದುರಾಗಿ ನಿಲ್ಲಿಸಿದನು.