1 Chronicles 19:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅರಾಮ್ಯರು ತಾವು ಇಸ್ರೇಲರಿಂದ ಸೋತುಹೋದದ್ದನ್ನು ನೋಡಿ ಯೂಫ್ರೇಟೀಸ್ ನದಿಯ ಪೂರ್ವದಲ್ಲಿದ್ದ ಅರಾಮ್ಯರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೋಫಕನು ಹದದೆಜರನ ಸೇನಾಧಿಪತಿಯಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಅಪಜಯ ಹೊಂದಿದ್ದೇವೆಂದು ಗೊತ್ತಾದಾಗ ಅವರು ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೆಕಳುಹಿಸಿದರು. ಹದರೆಜರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.
Kannada BSI Bible 2016
ಅರಾಮ್ಯರು ತಾವು ಇಸ್ರಾಯೇಲಿನ ಮುಂದೆ ಸೋತುಹೋದದ್ದನ್ನು ಕಂಡಾಗ ಅವರು ದೂತರನ್ನು ಕಳುಹಿಸಿ ನದಿಯ ಆಚೆಯಲ್ಲಿರುವ ಅರಾಮ್ಯ ರನ್ನು ಕರಕೊಂಡರು. ಹದರೆಜರನ ಸೈನ್ಯಾಧಿಪತಿ ಯಾದ ಶೋಫಕನು ಅವರ ಮೇಲೆ ಇದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಾಮ್ಯರಿಗೆ ತಾವು ಇಸ್ರಾಯೇಲ್ಯರಿಂದ ಅಪಜಯ ಹೊಂದಿದೆವೆಂದು ಗೊತ್ತಾದಾಗ ಅವರು ಯೂಫ್ರೇಟೀಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೇ ಕಳುಹಿಸಿದರು. ಹದರೆಜರನ ಸೇನಾಪತಿಯಾದ ಶೋಫಕನು ಅವರ ನಾಯಕನಾದನು.
Kannada Bible (KNCL) BSI 2016
ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾಯಿತು. ಎಂದೇ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಸಿರಿಯಾದವರನ್ನು ಕರೇ ಕಳುಹಿಸಿದರು. ಹದರೆಜೆರನ ಸೇನಾಪತಿಯಾದ ಶೋಫಕನು ಅವರ ನಾಯಕನಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಸೋತುಹೋದೆವೆಂದು ತಿಳಿದಾಗ, ಅವರು ದೂತರನ್ನು ಕಳುಹಿಸಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಇತರ ಅರಾಮ್ಯರನ್ನು ಕರೆಯಿಸಿಕೊಂಡರು. ಹದದೆಜೆರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.