1 Chronicles 2:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೆಚ್ರೋನನು ಅರವತ್ತು ವರ್ಷ ಪ್ರಾಯದವನಾದಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಆಕೆಯಲ್ಲಿ ಹೆಚ್ರೋನನು ಸೆಗೂಬನನ್ನು ಪಡೆದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆಚ್ರೋನನು ಅರವತ್ತು ವರ್ಷದವನಾದಾಗ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಮಗಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಂದ ಸೆಗೂಬನನ್ನು ಪಡೆದಳು.
Kannada BSI Bible 2016
ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆಚ್ರೋನನು ಅರುವತ್ತು ವರುಷದವನಾದಾಗ ಗಿಲ್ಯಾದ್ಯರ ಮೂಲ ಪುರುಷನಾದ ಮಾಕೀರನ ಮಗಳನ್ನು ಪರಿಗ್ರಹಿಸಲು ಆಕೆಯು ಅವನಿಂದ ಸೆಗೂಬನನ್ನು ಹೆತ್ತಳು.
Kannada Bible (KNCL) BSI 2016
ಹೆಚ್ರೋನ ಅರುವತ್ತು ವರ್ಷದವನಾದಾಗ ಗಿಲ್ಯಾದನ ಸೋದರಿಯಾದ ಮಾಕೀರನ ಮಗಳನ್ನು ಮದುವೆಯಾದನು. ಅವರಿಗೆ ಸೆಗೂಬ ಎಂಬ ಮಗ ಜನಿಸಿದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ಹೆಚ್ರೋನನು ಅರವತ್ತು ವರ್ಷದವನಾಗಿರುವಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬ ಎಂಬ ಮಗನನ್ನು ಹೆತ್ತಳು.