1 Chronicles 2:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಗೆಷೂರ್ ಮತ್ತು ಅರಾಮನು ಯಾಯೀರನ ಊರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವೆಲ್ಲವೂ ಗಿಲ್ಯಾದನ ತಂದೆಯಾದ ಮಾಕೀರನಿಗೆ ಸೇರಿದವುಗಳಾಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗೆಷೂರ್ಯರು ಮತ್ತು ಅರಾಮ್ಯರು ಯಾಯೀರನ ಸಂತಾನದವರಿಂದ ಯಾಯೀರಿನ ಗ್ರಾಮಗಳನ್ನೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನು, ಒಟ್ಟು ಅರವತ್ತು ಸಂಸ್ಥಾನಗಳನ್ನು ಗೆದ್ದುಕೊಂಡರು. ಈ ಸಂಸ್ಥಾನದವರೆಲ್ಲರೂ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಗೋತ್ರದವರು.
Kannada BSI Bible 2016
ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗೆಷೂರ್ಯರೂ ಅರಾಮ್ಯರೂ ಯಾಯೀರನ ಸಂತಾನದವರಿಂದ ಯಾಯೀರನ ಗ್ರಾಮಗಳನ್ನೂ ಕೆನತ್ ಪ್ರಾಂತದ ಗ್ರಾಮಗಳನ್ನೂ ಒಟ್ಟು ಅರುವತ್ತು ಸ್ಥಾನಗಳನ್ನು ಕಿತ್ತುಕೊಂಡರು. ಈ ಸ್ಥಾನಗಳವರೆಲ್ಲರೂ ಗಿಲ್ಯಾದ್ಯರ ಮೂಲ ಪುರುಷನಾದ ಮಾಕೀರನ ಗೋತ್ರದವರು.
Kannada Bible (KNCL) BSI 2016
ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.