1 Chronicles 2:42 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕಾಲೇಬನು ಯೆರಹ್ಮೇಲನ ತಮ್ಮ. ಅವನಿಗೆ ಕೆಲವು ಗಂಡುಮಕ್ಕಳಿದ್ದರು. ಚೊಚ್ಚಲಮಗನು ಮೇಷ. ಮೇಷನು ಜೀಫ್ಯನ ತಂದೆ. ಮಾರೇಷನು ಸಹ ಕಾಲೇಬನ ಮಗ. ಮಾರೇಷನು ಹೆಬ್ರೋನನ ತಂದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು.
Kannada BSI Bible 2016
ಯೆರಹೇಲ್ಮನ ಸಹೋದರನಾದ ಕಾಲೇಬನ ಮಕ್ಕಳು -- ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಮತ್ತು ಹೆಬ್ರೋ ನ್ಯನ ತಂದೆಯಾದ ಮಾರೇಷನಿಗೆ ಮಕ್ಕಳು ಉಂಟಾ ಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರಹ್ಮೇಲನ ಸಹೋದರನಾದ ಕಾಲೇಬನ ಸಂತಾನದವರು - ಚೊಚ್ಚಲನೂ ಜೀಫ್ಯರ ಮೂಲಪುರುಷನೂ ಆದ ಮೇಷನು, ಮಾರೇಷ ವಂಶದವರು ಇವರೇ.
Kannada Bible (KNCL) BSI 2016
ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು: ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.