1 Chronicles 21:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ನಡೆಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು.
Kannada BSI Bible 2016
ಆದರೆ ಅರಸನ ಮಾತು ಯೋವಾಬನಿಗೆ ವಿರೋಧವಾಗಿ ಜಯಗೊಂಡಿತು. ಆಗ ಯೋವಾಬನು ಹೊರಟು ಇಸ್ರಾಯೇಲಿನ ಸಮಸ್ತ ದೇಶದ ಮೇಲೆ ಹೋಗಿ ಯೆರೂಸಲೇಮಿಗೆ ತಿರಿಗಿ ಬಂದು ದಾವೀದನಿಗೆ ಜನರ ಒಟ್ಟು ಲೆಕ್ಕವನ್ನು ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲ್ಯರ ಎಲ್ಲಾ ಪ್ರಾಂತಗಳಲ್ಲಿ ಸಂಚರಿಸಿ ಯೆರೂಸಲೇವಿುಗೆ ಹಿಂದಿರುಗಿದನು.
Kannada Bible (KNCL) BSI 2016
ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದ್ದರಿಂದ, ಅವನು ಹೊರಟುಹೋಗಿ ಇಸ್ರಯೇಲರ ಪ್ರಾಂತ್ಯಗಳಲ್ಲೆಲ್ಲಾ ಸಂಚರಿಸಿ ಜೆರುಸಲೇಮಿಗೆ ಹಿಂದಿರುಗಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆಗ ಅವನು ಹೊರಟು, ಇಸ್ರಾಯೇಲಿನ ಸಮಸ್ತ ಪ್ರಾಂತಗಳಿಗೆ ಹೋಗಿ, ಯೆರೂಸಲೇಮಿಗೆ ತಿರುಗಿಬಂದನು.