1 Chronicles 22:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲಿನಲ್ಲಿ ವಾಸಿಸುತ್ತಿದ್ದ ಪರದೇಶಸ್ಥರನ್ನೆಲ್ಲಾ ದಾವೀದನು ಬರಹೇಳಿ ಅವರಲ್ಲಿಂದ ಕಲ್ಲುಕುಟಿಗರನ್ನು ಆರಿಸಿ ತೆಗೆದುಕೊಂಡನು. ದೇವಾಲಯವನ್ನು ಕಟ್ಟಲು ಕಲ್ಲುಗಳನ್ನು ಕೆತ್ತಿ ತಯಾರಿಸುವ ಕೆಲಸ ಅವರದಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ದಾವೀದನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯಜನಗಳನ್ನು ಒಟ್ಟುಗೂಡಿಸುವುದಕ್ಕೆ ಆಜ್ಞಾಪಿಸಿ, ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು.
Kannada BSI Bible 2016
ದಾವೀದನು ಇಸ್ರಾಯೇಲಿನ ದೇಶದಲ್ಲಿರುವ ಪರ ದೇಶಸ್ಥರನ್ನು ಕೂಡಿಸಲು ಹೇಳಿ ದೇವರ ಮನೆಯನ್ನು ಕಟ್ಟಿಸುವದಕ್ಕೆ ಕೆತ್ತನೆ ಕಲ್ಲುಗಳನ್ನು ಕಡಿಯುವ ಹಾಗೆ ಕುಟಿಗರನ್ನು ನೇಮಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ದಾವೀದನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯಜನಗಳನ್ನು ಕೂಡಿಸುವದಕ್ಕೆ ಆಜ್ಞಾಪಿಸಿ ಅವರಲ್ಲಿದ್ದ ಕಲ್ಲು ಕುಟಿಗರನ್ನು ದೇವಾಲಯ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವದಕ್ಕೆ ನೇವಿುಸಿದನು.
Kannada Bible (KNCL) BSI 2016
ಅನಂತರ ದಾವೀದನು ಇಸ್ರಯೇಲ್ ನಾಡಿನಲ್ಲಿದ್ದ ಅನ್ಯಜನಗಳನ್ನು ಕೂಡಿಸುವುದಕ್ಕೆ ಆಜ್ಞಾಪಿಸಿದನು. ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಇಸ್ರಾಯೇಲ್ ದೇಶದಲ್ಲಿರುವ ಪರದೇಶಸ್ಥರನ್ನು ಕೂಡಿಸಲು ಹೇಳಿ, ದೇವರ ಆಲಯವನ್ನು ಕಟ್ಟಿಸುವುದಕ್ಕೆ ಕೆತ್ತಿದ ಕಲ್ಲುಗಳನ್ನು ಕಡಿಯುವ ಹಾಗೆ ಕಲ್ಲುಕುಟಿಗರನ್ನು ನೇಮಿಸಿದನು.