1 Chronicles 22:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲದೆ ಲೆಕ್ಕಮಾಡಲು ಅಸಾಧ್ಯವಾದಷ್ಟು ದೇವದಾರು ಮರಗಳ ದಿಮ್ಮಿಯನ್ನು ಕೂಡಿಸಿಟ್ಟಿದ್ದನು. ತೂರ್ಯರು ಮತ್ತು ಚೀದೋನಿನವರು ಆ ದಿಮ್ಮಿಗಳನ್ನು ದಾವೀದನಿಗೆ ತಂದು ಕೊಟ್ಟಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೆಕ್ಕವಿಲ್ಲದ್ದಷ್ಟು ತಾಮ್ರವನ್ನೂ, ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು. ಚೀದೋನ್ಯರು ಮತ್ತು ತೂರ್ಯರೂ ಅವನಿಗೆ ದೇವದಾರುಮರಗಳನ್ನು ತಂದುಕೊಟ್ಟರು.
Kannada BSI Bible 2016
ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿ ಸಿದನು; ಚೀದೋನ್ಯರೂ ತೂರ್ಯರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೆಕ್ಕವಿಲ್ಲದಷ್ಟು ತಾಮ್ರವನ್ನೂ ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು; ಚೀದೋನ್ಯರೂ ತೂರ್ಯರೂ ಅವನಿಗೆ ದೇವದಾರು ಮರಗಳನ್ನು ತಂದು ಕೊಟ್ಟರು.
Kannada Bible (KNCL) BSI 2016
ಎಣಿಸಲಾಗದಷ್ಟು ದೇವದಾರು ಮರಗಳನ್ನೂ ಸಿದ್ಧಪಡಿಸಿದನು; ಸಿದೋನ್ ಹಾಗು ಟೈರಿನ ಜನರು ಅವನಿಗೆ ದೇವದಾರು ಮರಗಳನ್ನು ಒದಗಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿಸಿದನು. ಏಕೆಂದರೆ ಸೀದೋನ್ಯರೂ, ಟೈರಿನವರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು.