1 Chronicles 22:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು, “ನಾವು ನಮ್ಮ ದೇವರಿಗೆ ಮಹಾದೊಡ್ಡ ಆಲಯವನ್ನು ಕಟ್ಟಿಸಬೇಕು. ಆದರೆ ನನ್ನ ಮಗನಾದ ಸೊಲೊಮೋನನು ಇನ್ನೂ ಎಳೆಪ್ರಾಯದವನು; ಅವನು ಕಲಿಯ ಬೇಕಾದದ್ದು ಇನ್ನೂ ಬೇಕಾದಷ್ಟಿದೆ. ದೇವಾಲಯವು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗಿದ್ದು ಅದರ ಸೌಂದರ್ಯ ಮತ್ತು ವಿನ್ಯಾಸವು ಹೆಸರುವಾಸಿಯಾಗಿರಬೇಕು. ಅದಕ್ಕಾಗಿಯೇ ನಾನು ಆ ದೇವಾಲಯಕ್ಕಾಗಿ ಸಮಸ್ತವನ್ನು ಸಿದ್ಧಪಡಿಸುತ್ತೇನೆ” ಅಂದುಕೊಂಡನು. ಅಲ್ಲದೆ ಅವನು ಸಾಯುವುದಕ್ಕಿಂತ ಮುಂಚೆ ದೇವಾಲಯವನ್ನು ಕಟ್ಟುವುದಕ್ಕೆ ಬೇಕಾಗಿರುವವುಗಳನ್ನೆಲ್ಲಾ ಕೂಡಿಸಿಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ತನ್ನ ಮನಸ್ಸಿನಲ್ಲಿ ತನ್ನ ಮಗನಾದ ಸೊಲೊಮೋನನು ಎಳೆ ಪ್ರಾಯದವನಾಗಿದ್ದಾನೆ. ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯದ ಕೀರ್ತಿಯು ಎಲ್ಲಾ ದೇಶಗಳಲ್ಲಿ ಘನತೆಯನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾಗಿರಬೇಕು. ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವುದಕ್ಕೆ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿದನು.
Kannada BSI Bible 2016
ಇದ ಲ್ಲದೆ ದಾವೀದನು--ನನ್ನ ಮಗನಾದ ಸೊಲೊಮೋ ನನು ಹುಡುಗನಾಗಿಯೂ ಮೃದುವಾದವನಾಗಿಯೂ ಇದ್ದಾನೆ; ಕರ್ತನಿಗೆ ಕಟ್ಟಬೇಕಾದ ಮನೆಯೂ ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ ಸೌಂದರ್ಯದ ಲ್ಲಿಯೂ ಅಧಿಕ ಘನವಾಗಿರಬೇಕು; ನಾನು ಅದ ಕ್ಕೋಸ್ಕರ ಈಗ ಸಿದ್ಧಮಾಡುವೆನೆಂದು ಹೇಳಿದನು. ಆದದರಿಂದ ದಾವೀದನು ಸಾಯುವದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು [ತನ್ನ ಮನಸ್ಸಿನಲ್ಲಿ] - ನನ್ನ ಮಗನಾದ ಸೊಲೊಮೋನನು ಎಳೇ ಪ್ರಾಯದವನಾಗಿದ್ದಾನೆ; ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯವು ಎಲ್ಲಾ ದೇಶಗಳಲ್ಲಿ ಕೀರ್ತಿ ಘನಗಳನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾದದ್ದಾಗಿರಬೇಕು; ಆದದರಿಂದ ಅದಕ್ಕೆ ಬೇಕಾಗುವದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವದಕ್ಕೆ ಮೊದಲೇ ಬಹಳವಾಗಿ ಸೌರಣೆಮಾಡಿದನು.
Kannada Bible (KNCL) BSI 2016
ದಾವೀದನು ತನ್ನಲ್ಲೇ, “ನನ್ನ ಮಗ ಸೊಲೊಮೋನನು ಎಳೇ ಪ್ರಾಯದವನು. ಸರ್ವೇಶ್ವರನಿಗೆ ಕಟ್ಟಿಸತಕ್ಕ ದೇವಾಲಯವು, ಜಗತ್ತಿನಲ್ಲೆಲ್ಲಾ ಸುಪ್ರಸಿದ್ಧವಾಗಿರಬೇಕು; ಅದು ಅತಿ ಅದ್ಭುತಕರವಾಗಿರಬೇಕು; ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು,” ಎಂದುಕೊಂಡನು. ಸಾಯುವುದಕ್ಕೆ ಮೊದಲೇ ಹಲವಾರು ಸಲಕರಣೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಜ್ಜು ಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು, “ನನ್ನ ಮಗ ಸೊಲೊಮೋನನು ಎಳೆಯ ಪ್ರಾಯದವನಾಗಿದ್ದಾನೆ. ಯೆಹೋವ ದೇವರಿಗೆ ಕಟ್ಟಬೇಕಾದ ಆಲಯವು ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ, ಸೌಂದರ್ಯದಲ್ಲಿಯೂ ಅಧಿಕ ಘನವುಳ್ಳದ್ದಾಗಿರಬೇಕು. ನಾನು ಅದಕ್ಕೋಸ್ಕರ ಈಗ ಸಿದ್ಧಮಾಡುವೆನು,” ಎಂದು ಹೇಳಿದನು. ಆದ್ದರಿಂದ ದಾವೀದನು ಸಾಯುವುದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.