1 Chronicles 23:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚಾರಿಕೆಯನ್ನು ನಡೆಸುತ್ತಿದ್ದರು. ಅವರ ಕೆಲಸಗಳು ಯಾವುದೆಂದರೆ, ಅಂಗಳಗಳ ಕೋಣೆಗಳನ್ನು ಸ್ವಚ್ಛಮಾಡಿ ನೋಡಿಕೊಳ್ಳುವುದೂ, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದೂ,
Kannada BSI Bible 2016
ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚರ್ಯೆಯನ್ನು ನಡಿಸುತ್ತಿದ್ದರು. ಅವರ ಕೆಲಸಗಳು ಯಾವವಂದರೆ - ಅಂಗಳ ಕೋಣೆಗಳನ್ನು ನೋಡಿಕೊಳ್ಳುವದೂ ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧ ಮಾಡುವದೂ ದೇವಾಲಯದಲ್ಲಿ ಸೇವೆಮಾಡುವದೂ
Kannada Bible (KNCL) BSI 2016
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಸರ್ವೇಶ್ವರನ ಆಲಯದ ಪರಿಚರ್ಯೆಯನ್ನು ನಡೆಸಬೇಕಾಗಿತ್ತು. ಅವರ ಕೆಲಸ ಕಾರ್ಯ ಇವು: ಅಂಗಳವನ್ನೂ ಅಲ್ಲಿಯ ಕೋಣೆಗಳನ್ನು ನೋಡಿಕೊಳ್ಳುವುದು, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದು, ದೇವಾಲಯದಲ್ಲಿ ಸೇವೆಮಾಡುವುದು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,