1 Chronicles 24:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ವರ್ಗದವರನ್ನು ಕ್ರಮವಾಗಿ ದೇವಾಲಯದಲ್ಲಿ ಸೇವೆಮಾಡಲು ಆರಿಸಲಾಯಿತು. ಇವರು ಆರೋನನ ಆರಾಧನಾ ಪದ್ದತಿಯನ್ನು ಅನುಸರಿಸಿದರು. ಇಸ್ರೇಲರ ದೇವರಾದ ಯೆಹೋವನು ಆರಾಧನಾ ಕ್ರಮಗಳನ್ನು ಆರೋನನಿಗೆ ತಿಳಿಸಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರೋನ್ಯರು ಈ ವರ್ಗ ಕ್ರಮದಿಂದ ಯೆಹೋವನ ಆಲಯಕ್ಕೆ ಬಂದು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನೇಮಿಸಿದ ಸೇವೆಯನ್ನು ನಡೆಸತಕ್ಕದ್ದು.
Kannada BSI Bible 2016
ಇವೇ ಇಸ್ರಾಯೇಲ್‌ ದೇವರಾದ ಕರ್ತನು ತಮ್ಮ ತಂದೆಯಾದ ಆರೋನನಿಗೆ ಆಜ್ಞಾಪಿಸಿದ ಹಾಗೆ ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ ಕರ್ತನ ಮನೆಯಲ್ಲಿ ಸೇವೆಮಾಡುವದಕ್ಕೆ ಬರಬೇಕಾದ ಅವರ ನಿಯಮಗಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಪ್ಪತ್ತನಾಲ್ಕನೆಯದು ಮಾಜ್ಯನಿಗೆ. ಆರೋನ್ಯರು ಈ ವರ್ಗಕ್ರಮದಿಂದ ಯೆಹೋವನ ಆಲಯಕ್ಕೆ ಬಂದು, ಇಸ್ರಾಯೇಲ್ ದೇವರಾದ ಯೆಹೋವನು ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನಿಯವಿುಸಿದ ಸೇವೆಯನ್ನು ನಡಿಸತಕ್ಕದ್ದು.
Kannada Bible (KNCL) BSI 2016
ಆರೋನ್ಯರು ಈ ವರ್ಗಕ್ರಮದಲ್ಲಿ ಸರ್ವೇಶ್ವರನ ಆಲಯಕ್ಕೆ ಬಂದು, ಲೇವಿಯರ ಮೂಲ ಪುರುಷನಾದ ಆರೋನನ ಮುಖಾಂತರ ಇಸ್ರಯೇಲ್ ದೇವರಾದ ಸರ್ವೇಶ್ವರ ನಿಯಮಿಸಿದ ಸೇವೆಯನ್ನು ನಡೆಸಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು.