1 Chronicles 25:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರೆಲ್ಲರು ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಹೇಮಾನನಿಗೆ, “ನೀನು ಅಭಿವೃದ್ಧಿ ಹೊಂದುವಹಾಗೆ ಮಾಡುವೆನು” ಎಂಬುದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಗಂಡುಮಕ್ಕಳನ್ನೂ, ಮೂರು ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
Kannada BSI Bible 2016
ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಅವನಿಗೆ - ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು ಎಂಬದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
Kannada Bible (KNCL) BSI 2016
ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.