1 Chronicles 26:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕೋರಹಿಯ ವಂಶದವರಲ್ಲಿ ದ್ವಾರಪಾಲಕರು ಯಾರೆಂದರೆ: ಮೆಷೆಲೆಮ್ಯ ಮತ್ತು ಅವನ ಗಂಡುಮಕ್ಕಳು. (ಮೆಷೆಲೆಮ್ಯನು ಕೋರಹಿಯನ ಮಗ. ಕೋರಹಿಯನು ಆಸಾಫನ ಕುಲದವನಾಗಿದ್ದನು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವಾಲಯದ ದ್ವಾರಪಾಲಕ ವರ್ಗಗಳ ವಿಷಯ: ಕೋರಹೀಯನಾದ ಮೆಷೆಲೆಮ್ಯ ಎಂಬವನು, ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ.
Kannada BSI Bible 2016
ದ್ವಾರಪಾಲಕರ ವರ್ಗಗಳನ್ನು ಕುರಿತು ಏನಂದರೆ--ಕೊರಹೀಯರೊಳಗೆ ಆಸಾ ಫನ ಕುಮಾರರಲ್ಲಿ ಒಬ್ಬನಾಗಿರುವ ಕೋರೆಯನ ಮಗನಾದ ಮೆಷೆಲೆಮ್ಯನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದ್ವಾರಪಾಲಕವರ್ಗಗಳ ವಿಷಯ ಕೋರಹೀಯನಾದ ಮೆಷೆಲೆಮ್ಯ ಎಂಬವನು ಕೊರೇಯನ ಮಗನೂ ಆಸಾಫನ ಮೊಮ್ಮಗನೂ.
Kannada Bible (KNCL) BSI 2016
ದೇವಾಲಯದ ಕಾವಲುಗಾರರಾಗಿ ಸೇವೆಮಾಡಲು ನೇಮಕಗೊಂಡ ಲೇವಿಯರ ಹೆಸರುಗಳು: ಕೋರಹೀಯನಾದ ಮೆಷೆಲೆಮ್ಯ; ಇವನು ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.