1 Chronicles 26:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.
Kannada BSI Bible 2016
ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೇಲೆ ಕಂಡವರ ಕುಲಬಂಧುಗಳೂ ದೇವಾಲಯದ ಭಂಡಾರ, ಪರಿಶುದ್ಧವಸ್ತುಗಳ ಭಂಡಾರ ಇವುಗಳನ್ನು ಕಾಯುವವರೂ ಆದ ಲೇವಿಯರ ಪಟ್ಟಿ -
Kannada Bible (KNCL) BSI 2016
ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.