1 Chronicles 27:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಂಭತ್ತನೆಯ ಸೇನಾಪತಿ ಅಬೀಯೆಜೆರ್. ಇವನು ಅನತೋತ್ ಊರಿನ ಬೆನ್ಯಾಮೀನ್ ಕುಲದವನು. ವರ್ಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಬತ್ತನೆಯ ವರ್ಗದ ನಾಯಕನು. ಒಂಬತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Kannada BSI Bible 2016
ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಭತ್ತನೆಯ ವರ್ಗದ ನಾಯಕನು; ಒಂಭತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ ನಾಲ್ಕು ಸಾವಿರ.
Kannada Bible (KNCL) BSI 2016
ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬ್ಬೀಯೆಜೆರನು ಒಂಬತ್ತನೆಯ ವರ್ಗದ ನಾಯಕ. ಒಂಬತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂಬತ್ತನೆಯ ತಿಂಗಳಿನ ಒಂಬತ್ತನೆಯವನು ಬೆನ್ಯಾಮೀನ್ಯರಲ್ಲಿ ಒಬ್ಬನಾಗಿರುವ ಅನಾತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ 24,000 ಜನರು.