1 Chronicles 27:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾಲ್ಕನೆಯ ಸೇನಾಪತಿಯು ಅಸಾಹೇಲ. ಇವನು ವರ್ಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಯದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅಸಾಹೇಲನ ಮಗನಾದ ಜೆಬದ್ಯನು ಸೈನ್ಯಾಧಿಕಾರಿಯಾದನು. ಅಸಾಹೇಲನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನ ತಮ್ಮನಾದ ಅಸಾಹೇಲನು. ಅವನು ಸತ್ತ ನಂತರ ಅವನ ಮಗನಾದ ಜೆಬದ್ಯನು ನಾಲ್ಕನೆಯ ವರ್ಗದ ನಾಯಕನು. ನಾಲ್ಕನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Kannada BSI Bible 2016
ನಾಲ್ಕನೇ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋ ದರನಾದ ಅಸಾಹೇಲನು; ಅವನ ತರುವಾಯ ಅವನ ಮಗನಾದ ಜೆಬದ್ಯನು; ಅವನ ವರ್ಗದಲ್ಲಿ ಇಪ್ಪತ್ತ ನಾಲ್ಕು ಸಾವಿರ ಜನರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನ ತಮ್ಮನಾದ ಅಸಾಹೇಲನೂ ಅವನು ಸತ್ತನಂತರ ಅವನ ಮಗನಾದ ಜೆಬದ್ಯನೂ ನಾಲ್ಕನೆಯ ವರ್ಗದ ನಾಯಕರು; ನಾಲ್ಕನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವರ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.
Kannada Bible (KNCL) BSI 2016
ಯೋವಾಬನ ತಮ್ಮನಾದ ಅಸಾಹೇಲನೂ ಅವನು ಸತ್ತನಂತರ ಅವನ ಮಗ ಜೆಬದ್ಯನೂ ನಾಲ್ಕನೆಯ ವರ್ಗದ ನಾಯಕರು; ನಾಲ್ಕನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವರ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾಲ್ಕನೆಯ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋದರನಾದ ಅಸಾಯೇಲನು; ಅವನ ತರುವಾಯ ಅವನ ಮಗ ಜೆಬದ್ಯನು; ಅವನ ವರ್ಗದಲ್ಲಿ 24,000 ಜನರು.