1 Chronicles 28:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಬಳಿಕ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟನು. ದೇವಾಲಯ ಮತ್ತು ಅದರ ಮಂಟಪ, ಉಗ್ರಾಣದ ಕೋಣೆಗಳು, ಮೇಲುಪ್ಪರಿಗೆ, ಒಳಗಿನ ಕೋಣೆಗಳು ಮತ್ತು ಕೃಪಾಸನದ ಮಂದಿರದ ನಕ್ಷೆಗಳನ್ನು ಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು.
Kannada BSI Bible 2016
ಆಗ ದಾವೀದನು ತನ್ನ ಮಗನಾದ ಸೊಲೊ ಮೋನನಿಗೆ -- ದ್ವಾರಾಂಗಳದ ಮಾದರಿಯನ್ನೂ ಅದರ ಮನೆಗಳು, ಉಗ್ರಾಣಗಳು, ಮೇಲಿನ ಕೊಠಡಿ ಗಳು, ಅಂತರಂಗದ ಕೊಠಡಿಗಳು, ಕೃಪಾಸನದ ಸ್ಥಾನವು,
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕೊಟ್ಟಾರಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು ಕೃಪಾಸನಮಂದಿರ ಇವುಗಳ ನಕ್ಷೆಯನ್ನು ಕೊಟ್ಟು
Kannada Bible (KNCL) BSI 2016
ತರುವಾಯ ದಾವೀದನು ತನ್ನ ಮಗ ಸೊಲೊಮೋನನಿಗೆ ದೇವಾಲಯದ ಮಂಟಪ, ಉಗ್ರಾಣಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನಮಂದಿರ, ಇವುಗಳ ನಕ್ಷೆಯನ್ನು ಕೊಟ್ಟನು. ಸರ್ವೇಶ್ವರನ ಆಲಯದ ಅಂಗಳಗಳು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದಾವೀದನು ತನ್ನ ಮಗ ಸೊಲೊಮೋನನಿಗೆ, “ದ್ವಾರಾಂಗಳದ ಮಾದರಿಯನ್ನೂ, ಅದರ ಮನೆಗಳು, ಅದರ ಉಗ್ರಾಣಗಳು, ಅದರ ಮೇಲಿನ ಕೊಠಡಿಗಳು, ಅದರ ಅಂತರಂಗದ ಕೊಠಡಿಗಳು, ಕರುಣಾಸನದ ಸ್ಥಾನವು,