1 Chronicles 28:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಧೂಪವೇದಿಗೆ ಎಷ್ಟು ಅಪ್ಪಟ ಬಂಗಾರ ಬೇಕೆಂಬುದನ್ನು ದಾವೀದನು ತಿಳಿಸಿದನು. ಇದಲ್ಲದೆ ದೇವರ ಕೃಪಾಸನವನ್ನು ಮತ್ತು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಕೆರೂಬಿದೂತರನ್ನು ತಯಾರಿಸಲು ನಕ್ಷೆಗಳನ್ನು ದಾವೀದನು ಸೊಲೊಮೋನನಿಗೆ ಕೊಟ್ಟನು. ಕೆರೂಬಿದೂತರನ್ನು ಚಿನ್ನದಿಂದ ಮಾಡಲಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
Kannada BSI Bible 2016
ಇದಲ್ಲದೆ ಧೂಪಪೀಠಕ್ಕೋಸ್ಕರ ಬಂಗಾರವನ್ನೂ ರೆಕ್ಕೆಗಳನ್ನೂ ಚಾಚಿಕೊಂಡು ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಮುಚ್ಚುವ ಕೆರೂಬಿಗಳ ರಥದ ಮಾದರಿಗೋಸ್ಕರ ಬಂಗಾರವನ್ನೂ ತೂಗಿಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬದನ್ನು ವಿವರಿಸಿ ಹರಡಿದ ರೆಕ್ಕೆಗಳಿಂದ ಯೆಹೋವನ ನಿಬಂಧನಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟು
Kannada Bible (KNCL) BSI 2016
ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕಬಂಗಾರದ ತೂಕ ಎಷ್ಟೆಷ್ಟು ಇರಬೇಕೆಂಬುದನ್ನು ವಿವರಿಸಿದನು. ಹರಡಿದ ರೆಕ್ಕೆಗಳಿಂದ ಸರ್ವೇಶ್ವರನ ನಿಬಂಧನ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಧೂಪಪೀಠಕ್ಕೋಸ್ಕರ ಬಂಗಾರವನ್ನೂ, ರೆಕ್ಕೆಗಳನ್ನೂ ಚಾಚಿಕೊಂಡು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮುಚ್ಚುವ ಕೆರೂಬಿಗಳ ರಥದ ಮಾದರಿಗೋಸ್ಕರ ಬಂಗಾರವನ್ನೂ ತೂಗಿಕೊಟ್ಟನು.