1 Chronicles 29:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೆರೆದುಬಂದಿದ್ದ ಇಸ್ರೇಲರೆಲ್ಲರಿಗೆ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನು ಆರಿಸಿಕೊಂಡಿರುತ್ತಾನೆ. ಅವನು ಇನ್ನೂ ಎಳೆಪ್ರಾಯದವನಾಗಿರುವದರಿಂದ ಈ ಕಾರ್ಯವನ್ನು ಮಾಡಿಸಬೇಕಾದ ಜ್ಞಾನವು ಅವನಲ್ಲಿಲ್ಲ. ಆದರೆ ಕೆಲಸವು ಅತಿ ಘನವಾದದ್ದು. ಕಟ್ಟುವ ಆಲಯವು ಮನುಷ್ಯರಿಗಾಗಿಯಲ್ಲ. ದೇವರಾದ ಯೆಹೋವನಿಗಾಗಿಯಷ್ಟೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ಅರಸನಾದ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನೇ ದೇವಾಲಯ ಕಟ್ಟಲು ಆರಿಸಿಕೊಂಡಿದ್ದಾನೆ. ಆದರೆ ಅವನು ಇನ್ನೂ ಎಳೇ ಪ್ರಾಯದವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿಯಲ್ಲ.
Kannada BSI Bible 2016
ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನಂದರೆ -- ದೇವರು ಒಬ್ಬನನ್ನೇ ಆದುಕೊಂಡ ನನ್ನ ಮಗನಾದ ಸೊಲೊ ಮೋನನು ಚಿಕ್ಕವನಾಗಿಯೂ ಮೃದುವಾಗಿಯೂ ಇದ್ದಾನೆ. ಆದರೆ ಕೆಲಸವು ದೊಡ್ಡದು; ಈ ಅರಮನೆ ಯು ಮನುಷ್ಯರಿಗೋಸ್ಕರವಲ್ಲ, ಕರ್ತನಾದ ದೇವರಿ ಗೋಸ್ಕರವೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ಅರಸನಾದ ದಾವೀದನು - ದೇವರು ನನ್ನ ಮಗನಾದ ಸೊಲೊಮೋನನನ್ನೇ ಆರಿಸಿಕೊಂಡಿದ್ದಾನೆ; ಆದರೆ ಅವನು ಇನ್ನೂ ಎಳೇ ಪ್ರಾಯದವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಅಲ್ಲದೆ ಮನುಷ್ಯನಿಗಾಗಿಯಲ್ಲ;
Kannada Bible (KNCL) BSI 2016
ತರುವಾಯ ಅರಸ ದಾವೀದನು, “ದೇವರು ನನ್ನ ಮಗ ಸೊಲೊಮೋನನನ್ನೇ ಆರಿಸಿಕೊಂಡಿದ್ದಾರೆ. ಆದರೆ ಅವನು ಇನ್ನೂ ಚಿಕ್ಕವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟ ತಕ್ಕ ಮಂದಿರ ದೇವರಾದ ಸರ್ವೇಶ್ವರನಿಗಾಗಿ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನೆಂದರೆ, “ದೇವರು ಒಬ್ಬನನ್ನೇ ಆಯ್ದುಕೊಂಡ ನನ್ನ ಮಗ ಸೊಲೊಮೋನನು ಚಿಕ್ಕವನೂ ಎಳೆಯ ಪ್ರಾಯದವನೂ ಆಗಿದ್ದಾನೆ. ಆದರೆ ಕೆಲಸವು ದೊಡ್ಡದು. ಈ ಮಹಾ ಕಟ್ಟಡವು ಮನುಷ್ಯರಿಗೋಸ್ಕರವಲ್ಲ, ದೇವರಾದ ಯೆಹೋವ ದೇವರಿಗೋಸ್ಕರವೇ,