1 Chronicles 29:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೆರೆದುಬಂದಿದ್ದ ಎಲ್ಲಾ ಜನರ ಮುಂದೆ ದಾವೀದನು ದೇವರಾದ ಯೆಹೋವನನ್ನು ಸ್ತುತಿಸಿ ಹೀಗೆ ಪ್ರಾರ್ಥಿಸಿದನು: “ಇಸ್ರೇಲರ ದೇವರಾದ ಯೆಹೋವನೇ, ನಮ್ಮ ತಂದೆಯೇ, ನಿನಗೆ ನಿರಂತರವಾಗಿ ಕೊಂಡಾಟವಾಗಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ದಾವೀದನು ನೆರೆದ ಸಭೆಯ ಮುಂದೆ ಯೆಹೋವನನ್ನು ಸ್ತುತಿಸಿ ಹೇಳಿದ್ದೇನೆಂದರೆ, “ನಮ್ಮ ಪಿತೃವಾದ ಇಸ್ರಾಯೇಲಿನ ದೇವರೇ. ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ.
Kannada BSI Bible 2016
ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ದಾವೀದನು ನೆರೆದ ಸಭೆಯ ಮುಂದೆ ಯೆಹೋವನನ್ನು ಸ್ತುತಿಸಿ ಹೇಳಿದ್ದೇನಂದರೆ - ನಮ್ಮ ಪಿತೃವಾಗಿರುವ ಇಸ್ರಾಯೇಲನ ದೇವರೇ, ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ.
Kannada Bible (KNCL) BSI 2016
ಅನಂತರ ದಾವೀದನು ನೆರೆದ ಸಭೆಯ ಮುಂದೆ ಸರ್ವೇಶ್ವರನನ್ನು ಹೀಗೆ ಸ್ತುತಿಸಿದನು:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಸಮಸ್ತ ಕೂಟದ ಮುಂದೆ ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ನಮ್ಮ ತಂದೆಯಾದ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವು ಯುಗಯುಗಾಂತರಗಳಿಂದ ಯುಗಯುಗಾಂತರಗಳಿಗೂ ಸ್ತುತಿಗೆ ಪಾತ್ರರಾಗಿದ್ದೀರಿ.