1 Chronicles 29:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಮ್ಮ ದೇವರಾದ ಯೆಹೋವನೇ, ನಿನ್ನ ಆಲಯವನ್ನು ಕಟ್ಟುವುದಕ್ಕಾಗಿ ನಾವು ಇವೆಲ್ಲವನ್ನೂ ಒಟ್ಟುಗೂಡಿಸಿದ್ದೇವೆ. ನಿನ್ನ ಪವಿತ್ರ ಹೆಸರನ್ನು ಪ್ರಸಿದ್ಧಿಪಡಿಸಲು ನಾವು ಆಲಯವನ್ನು ಕಟ್ಟುತ್ತೇವೆ. ಆದರೆ ಇವೆಲ್ಲಾ ನಿನ್ನಿಂದಲೇ ಬಂದವುಗಳು; ಇವೆಲ್ಲಾ ನಿನಗೇ ಸಂಬಂಧಪಟ್ಟವುಗಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ಆಲಯ ಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು. ಇವೆಲ್ಲಾ ನಿನ್ನವೇ.
Kannada BSI Bible 2016
ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧನಾಮಕ್ಕೋಸ್ಕರ ಆಲಯಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು; ಇವೆಲ್ಲಾ ನಿನ್ನವೇ.
Kannada Bible (KNCL) BSI 2016
ನಮ್ಮ ದೇವರಾದ ಸರ್ವೇಶ್ವರಾ, ನಿಮ್ಮ ಶ್ರೀನಾಮಕ್ಕೆ ಒಂದು ನಿಲಯ ನಿರ್ಮಿಸಲು ನಾವು ಸಂಗ್ರಹಿಸಿರುವ ಈ ಎಲ್ಲಾ ವಸ್ತುಗಳು ನಮಗೆ ದೊರಕಿರುವುದು ನಿಮ್ಮಿಂದಲೇ. ಇವೆಲ್ಲವೂ ನಿಮ್ಮವೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಮ್ಮ ದೇವರಾದ ಯೆಹೋವ ದೇವರೇ, ನಿಮ್ಮ ಪರಿಶುದ್ಧ ನಾಮಕ್ಕೋಸ್ಕರ ನಿಮಗೆ ಆಲಯವನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿಮ್ಮಿಂದ ಬಂದದ್ದು. ಸಮಸ್ತವೂ ನಿಮ್ಮದು.