1 Chronicles 29:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ದೇವರೇ, ಜನರ ಹೃದಯಗಳನ್ನು ಪರೀಕ್ಷಿಸುವೆ. ಜನರು ಒಳ್ಳೆಯ ಕಾರ್ಯವನ್ನು ಯಥಾರ್ಥವಾದ ಹೃದಯದಿಂದ ಮಾಡುವಾಗ ನೀನು ಸಂತೋಷಪಡುವೆ. ಈ ವಸ್ತುಗಳನ್ನೆಲ್ಲಾ ನಾನು ಶುದ್ಧಹೃದಯದಿಂದ ಕೊಡುತ್ತಿದ್ದೇನೆ. ಇಲ್ಲಿ ನೆರೆದುಬಂದಿರುವವರೆಲ್ಲರೂ ನಿನಗೆ ಕಾಣಿಕೆಯನ್ನು ಸ್ವಯಿಚ್ಛೆಯಿಂದ ಕೊಟ್ಟಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ, ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದಿ ಎಂಬುದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವ ಇಚ್ಛೆಯಿಂದಲೇ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.
Kannada BSI Bible 2016
ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದೀ ಎಂಬದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ ಸ್ವೇಚ್ಫೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವೇಚ್ಫೆಯಿಂದಲೇ ನಿನಗೆ ಕಾಣಿಕೆಗಳನ್ನರ್ಪಿಸಿದ್ದಾರೆಂದು ನೋಡಿ ಸಂತೋಷಿಸುತ್ತೇನೆ.
Kannada Bible (KNCL) BSI 2016
ನನ್ನ ದೇವರೇ, ನೀವು ಹೃದಯವನ್ನು ಪರೀಕ್ಷಿಸುವವರು ಹಾಗೂ ಯಥಾರ್ಥಚಿತ್ತರನ್ನು ಮೆಚ್ಚುವವರು ಎಂಬುವುದನ್ನು ನಾನು ಬಲ್ಲೆ. ನಾನಿದನ್ನೆಲ್ಲಾ ಅರ್ಪಿಸಿರುವುದು ಶುದ್ಧಮನಸ್ಸಿನಿಂದಲೇ, ಸ್ವಂತ ಇಷ್ಟದಿಂದಲೇ. ಇಲ್ಲಿ ಕೂಡಿರುವ ನಿಮ್ಮ ಪ್ರಜೆಗಳೂ ಸ್ವಂತ ಇಷ್ಟದಿಂದಲೇ ನಿಮಗೆ ಕಾಣಿಕೆಗಳನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.