1 Chronicles 29:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ದಿವಸ ಸೇರಿಬಂದ ಜನರು ಯೆಹೋವನ ಸನ್ನಿಧಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಉಲ್ಲಾಸಿಸಿದರು. ಅವರು ದಾವೀದನ ಮಗನಾದ ಸೊಲೊಮೋನನನ್ನು ತಿರಿಗಿ ಅರಸನನ್ನಾಗಿಯೂ ಚಾದೋಕನನ್ನು ಮಹಾಯಾಜಕನನ್ನಾಗಿಯೂ ಯೆಹೋವನ ಸನ್ನಿಧಿಯಲ್ಲಿ ಅಭಿಷೇಕಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ದಾವೀದನ ಮಗನಾದ ಸೊಲೊಮೋನನನ್ನು ಪುನಃ ಅರಸನನ್ನಾಗಿ ಆರಿಸಿಕೊಂಡು ಅವನನ್ನು ರಾಜನನ್ನಾಗಿಸಿವುದಕ್ಕೂ, ಚಾದೋಕನನ್ನು ಯಾಜಕನಾಗುವುದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು.
Kannada BSI Bible 2016
ಎರಡನೇ ಸಾರಿ ದಾವೀದನ ಮಗನಾದ ಸೊಲೊಮೋನನನ್ನು ಅರಸನನ್ನಾಗಿ ಮಾಡಿ ಕರ್ತನ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕ ನನ್ನು ಯಾಜಕನಾಗಿಯೂ ಅಭಿಷೇಕಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಸನ್ನಿಧಿಯಲ್ಲಿ ಮಹಾ ಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ಅವರು ದಾವೀದನ ಮಗನಾದ ಸೊಲೊಮೋನನನ್ನು ತಿರಿಗಿ ಅರಸನನ್ನಾಗಿ ಆರಿಸಿಕೊಂಡು ಪ್ರಭುವಾಗುವದಕ್ಕೂ ಚಾದೋಕನನ್ನು ಯಾಜಕನಾಗುವದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು.
Kannada Bible (KNCL) BSI 2016
ಸರ್ವೇಶ್ವರನ ಸನ್ನಿಧಿಯಲ್ಲಿ ಮಹಾಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ದಾವೀದನ ಮಗ ಸೊಲೊಮೋನನನ್ನು ಮತ್ತೆ ಅರಸನನ್ನಾಗಿ ಆರಿಸಿಕೊಂಡು, ಅವನು ರಾಜನಾಗುವುದಕ್ಕೂ ಚಾದೋಕನು ಯಾಜಕನಾಗುವುದಕ್ಕೂ ಅಭಿಷೇಕಿಸಿ, ಸರ್ವೇಶ್ವರನಿಗೆ ಪ್ರತಿಷ್ಠಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು.