1 Chronicles 29:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆಳ್ಳಿಬಂಗಾರಗಳಿಂದ ತಯಾರಿಸಬೇಕಾದ ಎಲ್ಲಾ ವಸ್ತುಗಳಿಗೆ ಬೇಕಾದ ಬೆಳ್ಳಿಬಂಗಾರಗಳನ್ನೂ ಇದರ ನಾಜೂಕು ಕೆಲಸ ಮಾಡುವ ಕುಶಲಕರ್ಮಿಗಳನ್ನೂ ಕೊಟ್ಟಿರುತ್ತೇನೆ. ಈಗ ನಿಮ್ಮಲ್ಲಿ ಎಷ್ಟು ಮಂದಿ ನಿಮ್ಮನ್ನೇ ಯೆಹೋವನಿಗಾಗಿ ಪ್ರತಿಷ್ಠಿಸಿಕೊಳ್ಳುವಿರಿ?” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿ ಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆಯೋ ಅವರು ಮುಂದೆ ಬರಲಿ” ಎಂದು ನೆರೆದ ಸಭೆಗೆ ಹೇಳಿದನು.
Kannada BSI Bible 2016
ಬಂಗಾರವನ್ನು ಬಂಗಾ ರದ ಕೆಲಸಕ್ಕೂ ಬೆಳ್ಳಿಯನ್ನು ಬೆಳ್ಳಿಯ ಕೆಲಸಕ್ಕೂ ಕೈ ಕೆಲಸದವರಿಂದ ಮಾಡುವ ಎಲ್ಲಾ ಕೆಲಸಕ್ಕೂ ಕೊಟ್ಟಿ ದ್ದೇನೆ. ಇದಲ್ಲದೆ ಇಂದು ತನ್ನ ಸೇವೆಯನ್ನು ಕರ್ತನಿಗೆ ಒಪ್ಪಿಸುವವನು ಯಾರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಬೆಳ್ಳಿ ಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು, ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಮಾನುಗಳನ್ನು ಮಾಡಿಸಬೇಕು. ಈಹೊತ್ತು ಉದಾರ ಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ ಯಾರು ಮನಸ್ಸುಳ್ಳವರಾಗಿದ್ದಾರೆ ಎಂದು ನೆರೆದ ಸಭೆಗೆ ಹೇಳಲು
Kannada Bible (KNCL) BSI 2016
ಈ ಬೆಳ್ಳಿಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು, ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ಉದಾರಹಸ್ತದಿಂದ ಸರ್ವೇಶ್ವರನಿಗಾಗಿ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆ?” ಎಂದು ನೆರೆದ ಸಭೆಯನ್ನು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ತನ್ನನ್ನೇ ಯೆಹೋವ ದೇವರಿಗೆ ಇಷ್ಟಪೂರ್ವಕವಾಗಿ ಸಮರ್ಪಿಸಿಕೊಳ್ಳುವವರು ಯಾರು?” ಎಂದನು.