1 Chronicles 3:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನ ಕೆಲವು ಗಂಡುಮಕ್ಕಳು ಹೆಬ್ರೋನಿನಲ್ಲಿ ಹುಟ್ಟಿದರು. ದಾವೀದನ ಗಂಡುಮಕ್ಕಳು ಯಾರೆಂದರೆ: ಅಮ್ನೋನನು ದಾವೀದನ ಚೊಚ್ಚಲಮಗನು. ಅವನ ತಾಯಿ ಅಹೀನೋವಮಳು. ಈಕೆಯು ಇಜ್ರೇಲಿನವಳು. ಎರಡನೆಯ ಮಗನು ಕರ್ಮೇಲ್ಯಳಾದ ಅಬೀಗೈಲಳ ಮಗನಾದ ದಾನಿಯೇಲನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.
Kannada BSI Bible 2016
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು ಯಾರಂದರೆ -- ಇಜ್ರೇಲ್ಯಳಾದ ಅಹೀನೋವಮಳಿಂದ ಚೊಚ್ಚಲ ಮಗನಾದ ಅಮ್ನೋ ನನು, ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದ ಎರಡ ನೆಯವನಾದ ದಾನಿಯೇಲನು,
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು - ಚೊಚ್ಚಲಮಗನು ಅಮ್ನೋನನು; ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು; ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.
Kannada Bible (KNCL) BSI 2016
ದಾವೀದನು ಹೆಬ್ರೋನಿನಲ್ಲಿದ್ದಾಗ ಅವನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು ಇವು: ಅಮ್ನೋನ - ಜೆಸ್ರೀಲಿನ ಅಹೀನೋಮ ಇವನ ತಾಯಿ. ದಾನಿಯೇಲ - ಕರ್ಮೇಲಿನ ಆಬೀಗೈಲಳು ಇವನ ತಾಯಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು; ಕರ್ಮೇಲ್ಯಳಾದ ಅಬೀಗೈಲಳಿಂದ ಹುಟ್ಟಿದ ಎರಡನೆಯವನಾದ ದಾನಿಯೇಲನು,