1 Chronicles 3:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಆರು ಮಂದಿ ಮಕ್ಕಳು ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದರು. ದಾವೀದನು ಅಲ್ಲಿ ಏಳುವರೆ ವರ್ಷ ಆಳಿದನು. ದಾವೀದನು ಜೆರುಸಲೇಮಿನಲ್ಲಿ ಮೂವತ್ತುಮೂರು ವರ್ಷ ಅರಸನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರ್ಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತಮೂರು ವರ್ಷ ಆಳಿದನು.
Kannada BSI Bible 2016
ಈ ಆರು ಮಂದಿ ಹೆಬ್ರೋನಿನಲ್ಲಿ ಅವನಿಗೆ ಹುಟ್ಟಿದರು. ಅಲ್ಲಿ ಅವನು ಏಳೂವರೆ ವರುಷ ಆಳಿದನು; ಯೆರೂಸಲೇಮಿನಲ್ಲಿ ಮೂವತ್ತಮೂರು ವರುಷ ಆಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಮಂದಿ ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರುಷವೂ ಆರು ತಿಂಗಳೂ ಆಳಿದನು; ಮತ್ತು ಯೆರೂಸಲೇವಿುನಲ್ಲಿ ಮೂವತ್ತಮೂರು ವರುಷ ಆಳಿದನು.
Kannada Bible (KNCL) BSI 2016
ದಾವೀದನು ಹೆಬ್ರೋನಿನಲ್ಲಿ ಆಳ್ವಿಕೆ ಮಾಡಿದ ಏಳೂವರೆ ವರ್ಷಗಳಲ್ಲಿ ಈ ಆರೂ ಜನ ಮಕ್ಕಳು ಅಲ್ಲಿಯೇ ಹುಟ್ಟಿದರು. ಜೆರುಸಲೇಮಿನಲ್ಲಿ ಅವನು ಅರಸನಾಗಿ ಮೂವತ್ಮೂರು ವರ್ಷ ಆಡಳಿತ ಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು. ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.