1 Chronicles 4:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ. (Verses 17-18)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.
Kannada BSI Bible 2016
ಯೆತೆರನು, ಮೆರೆದನು, ಏಫೆರನು, ಯಾಲೋನನು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮಳನ್ನೂ ಶೆಮ್ಮೈಯನ್ನೂ ಎಷ್ಟೆಮೋವನ ತಂದೆಯಾದ ಇಷ್ಟಹನನ್ನೂ ಹೆತ್ತಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಜ್ರನ ಮಕ್ಕಳು - ಯೆತೆರ್, ಮೆರೆದ್ ಏಫೆರ್, ಯಾಲೋನ್ ಎಂಬವರು. ಮೆರೆದನು ಫರೋಹನ ಮಗಳಾದ ಬಿತ್ಯಳನ್ನು ಮದುವೆ ಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ವಿುರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.
Kannada Bible (KNCL) BSI 2016
ಎಜ್ರನಿಗೆ ಯೆತೆರ್, ಮೆರೆದ್, ಏಫೇರ್, ಯಾಲೋನ್ ಎಂಬ ನಾಲ್ವರು ಮಕ್ಕಳಿದ್ದರು. ಮೆರೆದನು ಈಜಿಪ್ಟಿನ ಅರಸನ ಮಗಳು ಬಿತ್ಯ ಎಂಬವಳನ್ನು ಮದುವೆಯಾಗಿ ಮಿರ್ಯಾಮ್ ಎಂಬ ಮಗಳನ್ನೂ ಶಮ್ಮೈ, ಎಷ್ಟೆಮೋವ ಎಂಬ ಇಬ್ಬರು ಗಂಡುಮಕ್ಕಳನ್ನೂ ಪಡೆದನು. ಇಷ್ಟಹನು ಎಷ್ಟಮೋವ್ ಪಟ್ಟಣವನ್ನು ಕಟ್ಟಿಸಿದನು. ಮೆರೆದನು ಸಹ ಯಾದ್ ಕುಲದ ಸ್ತ್ರೀಯೊಬ್ಬಳನ್ನು ಮದುವೆಯಾಗಿ ಅವಳಿಂದ ಮೂರು ಜನ ಮಕ್ಕಳನ್ನು ಪಡೆದನು: ಗೆದೋರ್ಯ ಪಟ್ಟಣ ಕಟ್ಟಿಸಿದ ಯೆರೆದ್, ಸೋಕೋವಿ ಪಟ್ಟಣದ ಸ್ಥಾಪಕ ಹೆಬಿರ್ ಮತ್ತು ಜಾನೋಹ ಪಟ್ಟಣದ ಸ್ಥಾಪಕ ಯೆಕೂತೀಯೇಲ್ ಎಂಬವರೇ ಆ ಮೂರು ಮಂದಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಜ್ರನ ಪುತ್ರರು: ಯೆತೆರ್, ಮೆರೆದ್, ಏಫೆರ್, ಯಾಲೋನ್ ಎಂಬವರು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮ್, ಶಮ್ಮಾಯ, ಎಷ್ಟೆಮೋವನ ತಂದೆ ಇಷ್ಬಾಹನನ್ನೂ ಹೆತ್ತಳು.