1 Chronicles 4:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು. (Verses 21-22)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದನ ಮಗನಾದ ಶೇಲಹನ ಸಂತಾನದವರು: ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,
Kannada BSI Bible 2016
ಯೆಹೂದನ ಮಗನಾದ ಶೇಲನ ಕುಮಾರರು --ಲೇಕಾಹ್ಯದ ತಂದೆಯಾದ ಏರನು, ಮರೇಷದ ತಂದೆಯಾದ ಲದ್ದನು, ಬೇತಪ್ಬೇವನ ಮನೆಯವರಾಗಿ ರುವ ನಾರುಗಳಿಂದ ನಯವಾದ ಕೆಲಸಮಾಡಿದವರ ಮನೆಯ ಸಂತತಿಗಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದನ ಮಗನಾದ ಶೇಲನ ಸಂತಾನದವರು - ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,
Kannada Bible (KNCL) BSI 2016
ಶೇಲನು ಯೆಹೂದನ ಮಕ್ಕಳಲ್ಲಿ ಒಬ್ಬನು. ಅವನ ವಂಶೀಯರಲ್ಲಿ ಕೆಲವರ ಹೆಸರುಗಳು ಇಂತಿವೆ: ಲೇಕಾಹ್ಯರ ಪಟ್ಟಣದ ಸ್ಥಾಪಕ ಏರ್; ಮರೇಷತ್‍ನ ಸ್ಥಾಪಕ ಲದ್ದ; ಬೇತೆಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದನ ಮಗ ಶೇಲಹನ ಪುತ್ರರು: ಲೇಕಾಹ್ಯನ ತಂದೆ ಏರನು, ಮಾರೇಷನ ತಂದೆ ಲದ್ದ; ಬೇತ್ ಅಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳವರು,