1 Chronicles 4:39 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಗೆದೋರ್ ಊರಿನ ಹೊರಭಾಗದಲ್ಲಿರುವ ತಗ್ಗಿನ ಪೂರ್ವ ದಿಕ್ಕಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.
Kannada BSI Bible 2016
ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದ ವರೆಗೂ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ತಮ್ಮ ಆಡುಕುರಿಗಳಿಗೋಸ್ಕರ ಹುಲ್ಲುಗಾವಲನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ
Kannada Bible (KNCL) BSI 2016
ಆದುದರಿಂದ ಅವರು ಪಶ್ಚಿಮದಿಕ್ಕಿನ ಕಡೆಗೆ ಗೆದೋರ್ ವರೆಗೆ ಪಸರಿಸಿದರು. ಆ ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಸ್ಥಳಗಳಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದವರೆಗೂ ಹೋದರು.