1 Chronicles 4:40 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲಿ ಫಲವತ್ತಾದ ಭೂಮಿಯನ್ನೂ ಹಸಿರು ಹುಲ್ಲುಗಾವಲನ್ನೂ ಕಂಡು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇಶವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದು ಸುಖ ಸಮಾಧಾನಗಳಿಂದ ಕೂಡಿತ್ತು. ಅಲ್ಲಿ ಮೊದಲಿನಿಂದಲೂ ವಾಸವಾಗಿದ್ದವರು ಹಾಮ್ಯರೇ.
Kannada BSI Bible 2016
ಅವರು ರಸವತ್ತಾದ ಒಳ್ಳೇ ಮೇವನ್ನು ಕಂಡು ಕೊಂಡರು. ಆ ದೇಶವು ವಿಸ್ತಾರವಾಗಿಯೂ ಶಾಂತ ವಾಗಿಯೂ ಸಮಾಧಾನವಾಗಿಯೂ ಇತ್ತು; ಪೂರ್ವ ದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ಶ್ರೇಷ್ಠವಾದ ಹಸುರುಹುಲ್ಲುಗಾವಲನ್ನು ಕಂಡರು. ದೇಶವು ಎಲ್ಲಾ ಕಡೆಗಳಲ್ಲಿಯೂ ವಿಸ್ತಾರವಾಗಿದ್ದು ಸುಖಸಮಾಧಾನಗಳಿಂದಿತ್ತು; ಅಲ್ಲಿ ಪೂರ್ವದಿಂದ ವಾಸವಾಗಿದ್ದವರು ಹಾಮ್ಯರೇ.
Kannada Bible (KNCL) BSI 2016
ಅಲ್ಲಿಯ ವಿಶಾಲ ಪ್ರದೇಶದಲ್ಲಿ ಸುಖಸಮೃದ್ಧಿಯುಳ್ಳ ಫಲವತ್ತಾದ ಹಸಿರುಗಾವಲು ಭೂಮಿ ಅವರಿಗೆ ದೊರೆಯಿತು. ಇವರಿಗಿಂತ ಮೊದಲು ಅಲ್ಲಿ ಹಾಮ್ಯರ್ ಜನಾಂಗದವರು ನೆಲೆಸಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.