1 Chronicles 4:43 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೇಕ್ಯರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನು ಕೊಂದು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಅಲ್ಲೇ ನೆಲೆಸಿದರು.
Kannada BSI Bible 2016
ಉಳಿದ ಅಮಾಲೇಕ್ಯರನ್ನು ಹೊಡೆದು ಅಲ್ಲಿ ಇಂದಿನ ವರೆಗೂ ವಾಸವಾಗಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೆ.
Kannada Bible (KNCL) BSI 2016
ಅಲ್ಲಿ ಅವರು, ಅಳಿದುಳಿದಿದ್ದ ಅಮಾಲೇಕ್ಯರನ್ನು ಸಂಹರಿಸಿ ತಾವೇ ಅಲ್ಲಿ ನೆಲೆಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತಪ್ಪಿಸಿಕೊಂಡ ಉಳಿದ ಅಮಾಲೇಕ್ಯರನ್ನು ಕೊಂದು, ಅಲ್ಲಿ ಇಂದಿನವರೆಗೂ ವಾಸವಾಗಿದ್ದಾರೆ.