1 Chronicles 5:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರೂಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಸೆಯ ಅರ್ಧಕುಲದವರಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಯುದ್ಧವೀರರಿದ್ದರು. ಇವರೆಲ್ಲಾ ಖಡ್ಗ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವದರಲ್ಲಿ ನಿಪುಣರಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು.
Kannada BSI Bible 2016
ರೂಬೇನನ ಕುಮಾರರಲ್ಲಿಯೂ ಗಾದ್ಯರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಗುರಾಣಿಯನ್ನು ಕತ್ತಿಯನ್ನು ಹಿಡಿಯುವದಕ್ಕೆ ಬಿಲ್ಲೆಸೆಯುವದಕ್ಕೆ ಯುದ್ಧ ದಲ್ಲಿ ಪ್ರವೀಣರೂ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡುವವರು ನಾಲ್ವತ್ತುನಾಲ್ಕುಸಾವಿರದ ಏಳು ನೂರ ಅರವತ್ತು ಮಂದಿಯಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ ಬಿಲ್ಲನ್ನು ಬೊಗ್ಗಿಸುವವರೂ ಯುದ್ಧನಿಪುಣರೂ ಆಗಿರುವ ನಾಲ್ವತ್ತನಾಲ್ಕು ಸಾವಿರದ ಏಳುನೂರ ಅರುವತ್ತು ಮಂದಿ ಸೈನಿಕರು ಹೋಗಿ
Kannada Bible (KNCL) BSI 2016
ರೂಬೇನ್, ಗಾದ್ ಮತ್ತು ಪೂರ್ವದಲ್ಲಿಯ ಮನಸ್ಸೆ ಕುಲಗಳಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಸೈನಿಕರು ಇದ್ದರು. ಅವರು ಗುರಾಣಿಗಳನ್ನೂ ಖಡ್ಗಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವುದರಲ್ಲಿ ಉತ್ತಮ ತರಬೇತಿ ಹೊಂದಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು.