1 Chronicles 5:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.
Kannada BSI Bible 2016
ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್‌ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿ ಆತನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶ ನಿವಾಸಿಗಳ ದೇವರುಗಳನ್ನು ಹಿಂಬಾಲಿಸಿದರು.
Kannada Bible (KNCL) BSI 2016
ಆದರೆ ಜನರು ತಮ್ಮ ಪಿತೃಗಳ ದೇವರಿಗೆ ಅವಿಧೇಯರಾದರು. ಆ ಪ್ರದೇಶದಿಂದ ದೇವರೇ ಹೊರದೂಡಿದ ಬೇರೆ ಜನಾಂಗಗಳ ದೇವತೆಗಳನ್ನು ಪೂಜಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.