1 Chronicles 5:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆಳನ ಜನರು ಯೂಫ್ರೇಟೀಸ್ ನದಿಯ ಸಮೀಪದಲ್ಲಿರುವ ಮರುಭೂಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಇದ್ದುದರಿಂದ ಗಿಲ್ಯಾದ್ ಪ್ರಾಂತ್ಯದಲ್ಲಿಯೇ ನೆಲೆಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು.
Kannada BSI Bible 2016
ಗಿಲ್ಯಾದಿನ ದೇಶದಲ್ಲಿ ಅವರ ದನಕುರಿಗಳು ಹೆಚ್ಚಾದದರಿಂದ ಅವನು ಮೂಡಣ ದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲುಗೊಂಡು ಅರಣ್ಯ ಪ್ರದೇಶದ ವರೆಗೂ ವಾಸ ವಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂಡಣದಿಕ್ಕಿನಲ್ಲಿ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ.
Kannada Bible (KNCL) BSI 2016
ಅವರಿಗೆ ಗಿಲ್ಯಾದಿನ ಪ್ರದೇಶದಲ್ಲಿ ಅನೇಕ ಕುರಿಮಂದೆಗಳು ಇದ್ದವು. ಆದುದರಿಂದ ಯುಫ್ರೆಟಿಸ್ ನದಿಯವರೆಗೆ ಹಬ್ಬಿಕೊಂಡಿದ್ದ ಪರ್ವತದಲ್ಲಿನ ಕಾಡಿನವರೆಗೆ ಎಲ್ಲಾ ಪ್ರದೇಶವನ್ನು ವಶಪಡಿಸಿಕೊಂಡಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.