1 Chronicles 6:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪವಿತ್ರ ಗುಡಾರದಲ್ಲಿ ಹಾಡುವುದೇ ಇವರ ದೇವರ ಸೇವೆಯಾಗಿತ್ತು. ಸೊಲೊಮೋನನು ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ತನಕ ಇವರು ಗುಡಾರದಲ್ಲಿ ತಮಗೆ ಹೇಳಿರುವ ಪ್ರಕಾರವೇ ಸೇವೆಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.
Kannada BSI Bible 2016
ಸೊಲೊ ಮೋನನು ಯೆರೂಸಲೇಮಿನಲ್ಲಿ ಕರ್ತನ ಮನೆಯನ್ನು ಕಟ್ಟುವ ವರೆಗೆ ಇವರು ಹಾಡುವ ಸೇವೆಯಲ್ಲಿ ಸಭೆಯ ಗುಡಾರ ನಿವಾಸದ ಮುಂದೆ ಸೇವಿಸುತ್ತಾ ಇದ್ದರು; ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನು ಯೆರೂಸಲೇವಿುನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯಸೇವೆಯನ್ನು ನಡಿಸುತ್ತಿದ್ದರು.
Kannada Bible (KNCL) BSI 2016
ಅರಸ ಸೊಲೊಮೋನ ದೇವಾಲಯವನ್ನು ಕಟ್ಟಿಸುವುದಕ್ಕಿಂತ ಪೂರ್ವದಲ್ಲಿ ಅವರು ಸರ್ವೇಶ್ವರನ ದರ್ಶನದ ಡೇರೆಯ ಬಳಿಯಲ್ಲಿ ಕ್ರಮಪ್ರಕಾರ ಅನುದಿನವೂ ಕಾರ್ಯ ನಿರ್ವಹಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.