1 Chronicles 6:78 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೆರಾರೀ ಸಂತತಿಯವರು ಮರುಭೂಮಿಯಲ್ಲಿದ್ದ ಬೆಚೆರ್, ಯಹಚ, ಕೆದೇಮೋತ್ ಮತ್ತು ಮೇಫಾತ್ ಎಂಬ ಊರುಗಳನ್ನೂ ಅವುಗಳ ಸಮೀಪದಲ್ಲಿದ್ದ ಹೊಲಗಳನ್ನೂ ರೂಬೇನ್ ಕುಲದವರಿಂದ ಪಡೆದುಕೊಂಡರು. ರೂಬೇನ್ ಕುಲದವರು ಜೆರಿಕೊ ಪಟ್ಟಣಕ್ಕೆ ಎದುರಾಗಿದ್ದ ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. (Verses 78-79)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
Kannada BSI Bible 2016
ಯೊರ್ದ ನಿನ ಆಚೇ ಕಡೆ ಯೆರಿಕೋವಿನ ಬಳಿಯಲ್ಲಿ ಯೊರ್ದ ನಿಂದ ಮೂಡಣದಿಕ್ಕಿನಲ್ಲಿ ರೂಬೇನನ ಗೋತ್ರದಿಂದ ಅರಣ್ಯದಲ್ಲಿರುವ ಬೆಚರೂ ಅದರ ಉಪನಗರಗಳೂ, ಯಹಚವೂ ಅದರ ಉಪನಗರಗಳೂ,
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್‍ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ
Kannada Bible (KNCL) BSI 2016
ರೂಬೇನ್ ಪ್ರದೇಶದಲ್ಲಿದ್ದ ಜೋರ್ಡನ್ ನದಿಯ ಪೂರ್ವದಲ್ಲಿ ಜೆರಿಕೋವನ್ನು ದಾಟಿ, ತಪ್ಪಲು ಪ್ರದೇಶದಲ್ಲಿಯ ಬೆಚೆರ್, ಯಹಚ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ;